ತಿರುವನಂತಪುರ : ಲೋಕಸಭೆ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಫೆ.26ರಂದು ಕಣ್ಣೂರಿನ ಪೆರಾವೂರಿನಲ್ಲಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ವಯನಾಡಿನಲ್ಲಿ ಕಾಂಗ್ರೆಸ್ ನಿರ್ಮಿಸುತ್ತಿರುವ ಮನೆಗಳ ಶಂಕುಸ್ಥಾಪನೆಗೆ ಆಗಮಿಸುತ್ತಿರುವ ಅವರು, ಬೆಳಗ್ಗೆ 11ಕ್ಕೆ ಪೆರಾವೂರ್ ತುಂಡಿ ಪ್ಯಾರಿಷ್ ಹಾಲ್‌ನಲ್ಲಿ ರೈತ ಮುಖಂಡರು ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಡಿಸಿಸಿ ಅಧ್ಯಕ್ಷ ಮಾರ್ಟಿನ್ ಜಾರ್ಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

0 Comments