ಕಾಸರಗೋಡು : ಅಪಾಯಕಾರಿಯಾಗಿರುವ ಕಾಡುಹಂದಿಗಳನ್ನು ನಿರ್ಮೂಲನೆ ಮಾಡಲು ಅರಣ್ಯ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳು ಕಾರ್ಯಾಚರಣೆ ತೀವ್ರಗೊಳಿಸಿವೆ. ಕಾಡುಹಂದಿಗಳು ಜಿಲ್ಲೆಯಲ್ಲಿ ಕೃಷಿಗೆ ವ್ಯಾಪಕ ಹಾನಿಯನ್ನುಂಟುಮಾಡುತ್ತಿವೆ. ಇದು ಮಾನವ ಜೀವಕ್ಕೂ ಅಪಾಯಕಾರಿಯಾಗಿದೆ ಎಂಬುದನ್ನು ಪರಿಣಿಸಿ ನಡೆಸಿದ ಕಾರ್ಯಚರಣೆಯಲ್ಲಿ, ಜಿಲ್ಲೆಯಲ್ಲಿ 111 ಆಕ್ರಮಣಕಾರಿ ಕಾಡುಹಂದಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಅರಣ್ಯ ಇಲಾಖೆ 45 ಹಂದಿಗಳನ್ನು ಕೊಂದಿದ್ದು, ಸ್ಥಳೀಯಾಡಳಿತ ಸಂಸ್ಥೆಗಳ ಪಂಚಾಯತ್ ನಿಯಮಿತ ಶೂಟರ್ ಗಳ ನೇತೃತ್ವದಲ್ಲಿ 66 ಹಂದಿಗಳನ್ನು ಕೊಲ್ಲಲಾಗಿದೆ. ಜಿಲ್ಲೆಯ 14 ಪಂಚಾಯತ್‌ಗಳಲ್ಲಿ ಕಾಡುಹಂದಿ ಸಮಸ್ಯೆ ತೀವ್ರವಾಗಿದೆ. ದೇಲಂಪಾಡಿ, ಕುತ್ತಿಕೋಲ್, ಮುಳಿಯಾರ್, ಪಣತ್ತಡಿ, ಕಲ್ಲಾರ್, ಕೋಟಮ್, ಬೇಲೂರ್, ಬಲಾಲ್, ಪೂರ್ವ ಎಲೆರಿ, ಪಶ್ಚಿಮ ಎಲೆರಿ, ಮಡಿಕೈ, ಕಿನಾನೂರು, ಕರಿಂದಲಂ, ಅಜಾನೂರ್, ಪುಲ್ಲೂರ್ ಪೆರಿಯ ಮತ್ತು ಕಯ್ಯೂರು ಚೀಮೇನಿ ಪಂಚಾಯತ್‌ಗಳಲ್ಲಿ ಹಂದಿಗಳು ಕೃಷಿ ಮತ್ತು ಮನುಷ್ಯರಿಗೆ ತೊಂದರೆ ಉಂಟುಮಾಡುತ್ತಿವೆ. ಅರಣ್ಯ ಇಲಾಖೆಯ ಮಿಷನ್ ವೈಲ್ಡ್ ಪಿಗ್ ನ ಭಾಗವಾಗಿ, ದೇಶಕ್ಕೆ ಅಪಾಯಕಾರಿಯಾಗಿರುವ ಕಾಡುಹಂದಿಗಳನ್ನು ನಿರ್ಮೂಲನೆ ಮಾಡಲು ಸ್ಥಳೀಯ ಸಂಸ್ಥೆಗಳು ಜತೆಗೂಡಿ ಕಾರ್ಯಾಚರಣೆಗಿಳಿದಿವೆ. ಜಿಲ್ಲೆಯಲ್ಲಿ 64 ಎಂ ಪ್ಯಾನಲ್ ಶೂಟರ್‌ಗಳಿದ್ದಾರೆ ಎಂದು ಜಿಲ್ಲಾ ಅರಣ್ಯ ಮುಖ್ಯಸ್ಥ ಎಂ ಜೋಸ್ ಮ್ಯಾಥ್ಯೂ ತಿಳಿಸಿದ್ದಾರೆ. ಶೂಟರ್‌ಗಳ ಪಟ್ಟಿ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಲಭ್ಯವಿದೆ. ಇದನ್ನು ಅರಣ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಿಂದ ಪಡೆಯಬಹುದು. (www.forest.kerala.gov.in). ಕಾಡುಹಂದಿಗಳ ಉಪಟಳದ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ, ಹಂದಿಗಳನ್ನು ಗುಂಡು ಹಾರಿಸಲು ಕ್ರಮ ಕೈಗೊಳ್ಳಲಾಗುವುದು. ವನ್ಯಜೀವಿ ವಾರ್ಡನ್‌ಗಳು ಮತ್ತು ಅಧಿಕೃತ ಅಧಿಕಾರಿಗಳಾದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ವಸತಿ ಪ್ರದೇಶಗಳಲ್ಲಿ ಹಾನಿ ಉಂಟುಮಾಡುವ ಕಾಡುಹಂದಿಗಳನ್ನು ಗುಂಡು ಹಾರಿಸಿ ಕೊಲ್ಲಲು ಆದೇಶಗಳನ್ನು ಹೊರಡಿಸಬಹುದು. ಕಾಡುಹಂದಿಗಳನ್ನು ಗುಂಡು ಹಾರಿಸಿದರೆ, ಶೂಟರ್‌ಗೆ ಪ್ರತಿ ಹಂದಿಗೆ 1,500 ರೂ. ಮತ್ತು ಸತ್ತ ಹಂದಿಯ ದೇಹಗಳನ್ನು ದಫನಮಾಡಿದವರಿಗೆ ತಲಾ 2,000 ರೂ. ನೀಡಲಾಗುತ್ತದೆ. ಇದಕ್ಕಾಗಿ, ಸ್ಥಳೀಯ ಸಂಸ್ಥೆಗೆ ವಿಪತ್ತು ಪರಿಹಾರ ನಿಧಿಯಿಂದ ವರ್ಷಕ್ಕೆ 1 ಲಕ್ಷ ರೂ. ವರೆಗೆ ನೀಡುವ ಯೋಜನೆ ಇದೆ ಎಂದು ಸ್ಪಷ್ಟಪಡಿಸಲಾಗಿದೆ.

0 Comments