ಮುಳ್ಳೇರಿಯ : ಗ್ಯಾರೇಜ್ ಮುಂಭಾಗ ನಿಲ್ಲಿಸಿದ ಲಾರಿಯಿಂದ ಬ್ಯಾಟರಿಗಳನ್ನು ಕಳವು ಮಾಡಿರುವುದಾಗಿ ಆದೂರು ಪೋಲಿಸರಿಗೆ ದೂರಲಾಗಿದೆ.
ಮಲಪ್ಪುರಂನ ಕಿಳುಪರಂಬ ಮಠದಲ್ಲಿ ಲಾರಿ ಮಾಲೀಕ ಅನಸ್ ಬಾಬು ನೀಡಿದ ದೂರಿನ ಮೇರೆಗೆ ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ತಿಂಗಳ 13 ರಂದು ಮುಳ್ಳೇರಿಯ ಸೌಪರ್ಣಿಕಾ ಆಟೋ ವರ್ಕ್ ಶಾಪ್ ಬಳಿ ನಿಂತಿದ್ದ ಲಾರಿಯಲ್ಲಿದ್ದ 30 ಸಾವಿರ ರೂ.ಮೌಲ್ಯದ ಎರಡು ಬ್ಯಾಟರಿಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
.jpeg)
0 Comments