Ticker

6/recent/ticker-posts

Ad Code

ಸಂಬೋಳ್ಯದ ಸುಮಂತ್ ಹತ್ಯೆ ಪ್ರಕರಣ : ತನಿಖೆ ಚುರುಕುಗೊಳಿಸುವಂತೆ ಮನವಿ


 ಬೆಳ್ತಂಗಡಿ :  ಓಡಿಲ್ನಾಳ ಗ್ರಾಮದ ಸಂಬೋಳ್ಯದ ಸುಬ್ರಹ್ಮಣ್ಯ ಹಾಗೂ ಲತಾ ದಂಪತಿಯ ಕಿರಿಯ ಪುತ್ರ ಸುಮಂತ್, ಕಳೆದ ಜನವರಿ 14, 2026ರಂದು ಧನು ಪೂಜೆಗೆಂದು ತೆರಳಿದ್ದ ವೇಳೆ ನಿಗೂಢವಾಗಿ ನಾಪತ್ತೆಯಾಗಿ, ನಂತರ ಶವವಾಗಿ ಪತ್ತೆಯಾಗಿದ್ದನು.

​ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸರ ಪ್ರಾಥಮಿಕ ವರದಿಯಲ್ಲಿ ಇದು ಹತ್ಯೆ ಎಂದು ಸಾಬೀತಾಗಿದ್ದರೂ, ದುರಂತ ನಡೆದು ಇಷ್ಟು ದಿನಗಳಾದರೂ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ, ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ  ಕಾಸರಗೋಡಿಗೆ ಆಗಮಿಸಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದರಾದಕೆ.ಸಿ. ವೇಣುಗೋಪಾಲ್ ಅವರಿಗೆ  ಕಾಸರಗೋಡು ಜಿ.ಪಂ.ಸದಸ್ಯ ಸೋಮಶೇಖರ್ ಜೆ.ಎಸ್ ಮನವಿ ಸಲ್ಲಿಸಿದರು. ಮನವಿಯನ್ನು ಆಲಿಸಿದ ಶ್ರೀ ಕೆ.ಸಿ. ವೇಣುಗೋಪಾಲ್ ಅವರು, ತಕ್ಷಣವೇ ಈ ಕುರಿತು ಕರ್ನಾಟಕ ರಾಜ್ಯದ ಗೃಹ ಸಚಿವರೊಂದಿಗೆ ಚರ್ಚಿಸಿ, ಉನ್ನತ ಮಟ್ಟದ ತನಿಖೆ ನಡೆಸಲು ಹಾಗೂ ಆರೋಪಿಗಳನ್ನು ಶೀಘ್ರವಾಗಿ ಪತ್ತೆಹಚ್ಚಲು ಸೂಚಿಸುವುದಾಗಿ ಭರವಸೆ ನೀಡಿದರು.

​ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ನಿರಂತರ  ಹೋರಾಟ ಮುಂದುವರಿಸುವುದಾಗಿ ಸೋಮಶೇಖರ್ ಜೆ.ಎಸ್. ತಿಳಿಸಿದ್ದಾರೆ.

Post a Comment

0 Comments