Ticker

6/recent/ticker-posts

Ad Code

ಕೇರಳ ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭ ಪೊಲೀಸರಿಗೆ ಹಲ್ಲೆ ಮಾಡಿ ಆಂಧ್ರಪ್ರದೇಶದಲ್ಲಿ 8 ವರ್ಷಗಳಿಂದ ಹೆಸರು ಬದಲಾಯಿಸಿ ತಲೆ ಮರೆಸಿ ಕೊಂಡಿದ್ದ ಆರೋಪಿ ಸೆರೆ

 

ಮಂಗಳೂರು : ಹಲವು ಅಪರಾಧಗಳಲ್ಲಿ ಆರೋಪಿಯಾಗಿ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಜ್ಞಾವರ ಗ್ರಾಮದ ನಿವಾಸಿ ಎನ್.ಎಂ.ಅಜೀಜ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕಡಬ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ವಾರಂಟ್ ಆರೋಪಿ ಅಜೀಜ್‌ಗೆ ಕರ್ನಾಟಕ ಉಚ್ಚ ನ್ಯಾಯಾಲಯ 10 ವರ್ಷ ಶಿಕ್ಷೆ ವಿಧಿಸಿರುತ್ತದೆ. 

ಅಜೀಜ್ ನನ್ನು 2018ರಲ್ಲಿ ಕೇರಳ ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪೊಲೀಸರಿಗೆ ಹಲ್ಲೆ ಮಾಡಿ ತಪ್ಪಿಸಿಕೊಂಡಿದ್ದು, ಅನಂತರ ಆಂಧ್ರಪ್ರದೇಶದಲ್ಲಿ ಜೇವರ್ಗಿ ನಿವಾಸಿ ಬಸವರಾಜು ಎಂಬುದಾಗಿ ಹೆಸರು ಬದಲಿಸಿ ವಾಸವಾಗಿದ್ದನು.

Post a Comment

0 Comments