Ticker

6/recent/ticker-posts

Ad Code

ಡಿವೈಡರ್‌ಗೆ ಕಾರು ಡಿಕ್ಕಿ : ಭೀಕರ ಅಪಘಾತದಲ್ಲಿ ನಟಿ ದಾರುಣ ಸಾವು

 


ಜೈಪುರ : ಕಿರುತೆರೆ ಮತ್ತು ಮಾಡೆಲಿಂಗ್ ಲೋಕದ ಉದಯೋನ್ಮುಖ ತಾರೆ ಹರ್ಷಿಲ್ ಕಾಲಿಯಾ (30) ಅವರು ಸೋಮವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಟಿ  ರಾತ್ರಿ 11:30 ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಆಕೆ ಚಲಾಯಿಸುತ್ತಿದ್ದ ಕಾರು ಜೈಪುರದ ಶಿಪ್ರಾಪಾತ್ ರಸ್ತೆಯಲ್ಲಿ  ನಿಯಂತ್ರಣ ಕಳೆದುಕೊಂಡು ರಸ್ತೆ ನಡುವೆ ಇದ್ದ ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿದ್ದು, ನಟಿಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರ  ತಲೆಗೆ ತೀವ್ರ ಪೆಟ್ಟಾಗಿದ್ದು, ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು  ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.

ಕಾಲಿಯಾ ಅವರು 'ಕ್ರೈಮ್ ನೆಕ್ಸ್ಟ್ ಡೋರ್' ವೆಬ್ ಸರಣಿಯಲ್ಲಿ ಅಭಿನಯಿಸಿದ್ದು, ಈ ಸರಣಿಯು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಿತ್ತು. ಮಿಸ್ ದಿವಾ ರಾಜಸ್ಥಾನ್ 2021 ವಿಜೇತೆಯಾಗಿರುವ ಅವರು  ಮಿಸ್ ಪಿಂಕ್ ಸಿಟಿ ರನ್ನರ್ ಅಪ್ ಟೈಟಲ್ ಅನ್ನು ಕೂಡಾ ಗೆದ್ದುಕೊಂಡಿದ್ದು, ನಿರೂಪಕಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಹಲವಾರು ರಾಜಸ್ಥಾನಿ ಹಾಡುಗಳಲ್ಲಿ ಪ್ರಮುಖ ಮಹಿಳಾ ಪಾತ್ರವನ್ನು ನಿರ್ವಹಿಸಿದ್ದರು. ಇತ್ತೀಚೆಗೆ, ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. 

Post a Comment

0 Comments