ಉಪ್ಪಳ : ಕಯ್ಯಾರು ಅರಿಯಾಳ ತರವಾಡಿನ ಶ್ರೀ ಮಲರಾಯ ಬಂಟ ಧೂಮಾವತಿ ದೈವಗಳ "ಧರ್ಮ ನೇಮೋತ್ಸವ" ವು ಮಾ. 26 ಮತ್ತು 27ರಂದು ನಡೆಯಲಿರುವುದು. ತಂತ್ರಿವರ್ಯರಾದ ಬಂಬ್ರಾಣ ಶ್ರೀ ಶಂಕರ ನಾರಾಯಣ ಕಡಮಣ್ಣಾಯರ ನೇತೃತ್ವದಲ್ಲಿ ಮಾ.26ರಂದು ಬೆಳಗ್ಗೆ ನವಕಲಶಾಭಿಷೇಕ, ಗಣಪತಿ ಹೋಮ, ಮುಡಿಪು ಪೂಜೆ, ನಾಗತಂಬಿಲ ನಡೆಯಲಿದೆ. ಮಧ್ಯಾಹ್ನ ಗಂಟೆ 1ಕ್ಕೆ ಅನ್ನ ಸಂತರ್ಪಣೆ, ರಾತ್ರಿ 8 ಗಂಟೆಗೆ ಭಂಡಾರ ಏರಿ, ಮಲರಾಯ ಬಂಟ ದೈವಗಳ ಧರ್ಮ ನೇಮೋತ್ಸವ, ಮಾ.27ರಂದು ಬೆಳಿಗ್ಗೆ ಶ್ರೀ ಧೂಮಾವತಿ, ಪೊಟ್ಟೋಳ್ ದೈವಗಳ ನೇಮ, ನಂತರ ಅನ್ನದಾನ, ರಾತ್ರಿ 8 ಕ್ಕೆ ಶ್ರೀ ಕಲ್ಲುರ್ಟಿ, ಪಂಜುರ್ಲಿ ದೈವಗಳ ತಂಬಿಲ, ಪ್ರಸಾದ ವಿತರಣೆ ನಡೆಯಲಿದೆ.
ಮನೋರಂಜನಾ ಕಾರ್ಯಕ್ರಮದಂಗವಾಗಿ 26ರಂದು ಸಂಜೆ 6ರಿಂದ ರಾತ್ರಿ 12 ರವರೆಗೆ ಶ್ರೀ ಆದಿ ಧೂಮಾವತಿ ಶ್ರೀದೇಯಿ ಬೈದೇತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ, ಗೆಜ್ಜೆಗಿರಿ ಇವರಿಂದ "ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ" ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

0 Comments