Ticker

6/recent/ticker-posts

Ad Code

3,200 ವರ್ಷಗಳ ಹಿಂದಿನ ಆದಿ ಮಾನವರ ಸಮಾಧಿ ಪತ್ತೆ

 

ಹಾವೇರಿ: 3,200 ವರ್ಷಗಳ ಹಿಂದಿನ ಆದಿ ಮಾನವರ ಸಮಾಧಿ  ಹಾವೇರಿ  ಜಿಲ್ಲೆ ರಾಣೇಬೆನ್ನೂರು  ತಾಲೂಕಿನ ಬಸಲಿಕಟ್ಟಿ ತಾಂಡಾದ ಬಳಿ ಪತ್ತೆಯಾಗಿದೆ.

3,200 ವರ್ಷಗಳ ಹಿಂದಿನ ಆದಿ ಮಾನವರನ್ನು ಸಮಾಧಿ ಮಾಡಲಾಗುತ್ತಿತ್ತು. ಅದರ ಗುರುತುಗಳು ಮರು ಅನ್ವೇಷಣೆಗೊಂಡಿವೆ. ರಾಣೇಬೆನ್ನೂರಿನ ಇತಿಹಾಸ ಸಂಶೋದಕ ಪ್ರಮೋದ್ ನಲವಾಗಲು ಸ್ಥಳ ಗುರುತಿಸಿ ಪತ್ತೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ಸಿಕ್ಕ ಕುರುಹುಗಳು ಮೆಗಾಲಿಥಿಕ್ (ಮಹಾಶಿಲಾಯುಗ) ಸಂಸ್ಕೃತಿಗೆ ಸೇರಿದ ಸಮಾಧಿಗಳು ಎನ್ನಲಾಗಿದೆ. 

ಇನ್ನು ಈ ಪ್ರದೇಶದಲ್ಲಿ ಕಲ್ಲಿನ ರಚನೆಗಳು ಪತ್ತೆಯಾಗಿದ್ದು, ಇವು ಆ ಭಾಗದ ಪ್ರಾಚೀನ ಮಾನವ ವಾಸಸ್ಥಳವನ್ನು ಸೂಚಿಸುತ್ತವೆ ಎನ್ನಲಾಗಿದೆ. ಇನ್ನಷ್ಟು ಉತ್ಖನನ ಕಾರ್ಯ ಮಾಡಿ ಇನ್ನಷ್ಟು ಇತಿಹಾಸ ಕುರುಹುಗಳು ಪತ್ತೆ ಮಾಡಬೇಕಿದೆ.

Post a Comment

0 Comments