Ticker

6/recent/ticker-posts

Ad Code

ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹತ್ಯೆ - ಅದೃಷ್ಟವಶಾತ್ ಮಗು ಪಾರು

 

ಮಂಡ್ಯ : ಕೌಟುಂಬಿಕ ಕಲಹಕ್ಕೆ 2ರ ಹರೆಯದ ಮಗುವನ್ನು ಕತ್ತು ಹಿಸುಕಿ, ಬಳಿಕ ದಂಪತಿ ನೇಣಿಗೆ  ಶರಣಾಗಿರುವ   ಹೃದಯ ವಿದ್ರಾವಕ ಘಟನೆ ಮಂಡ್ಯದ ಕೆ.ಆರ್.ಪೇಟೆ  ಪಟ್ಟಣದಲ್ಲಿ ನಡೆದಿದೆ. ಆದರೆ ಅಸ್ವಸ್ಥಗೊಂಡಿದ್ದ ಮಗು ಅದೃಷ್ಟವಶಾತ್ ಪಾರಾಗಿದೆ. ಹೊಸಕೋಟೆ ಗ್ರಾಮದ ದರ್ಶನ್, ದಿವ್ಯಶ್ರೀ ನೇಣಿಗೆ ಶರಣಾದ ದಂಪತಿ. ತಮ್ಮ ಎರಡು ವರ್ಷದ ಮಗುವನ್ನು ಕತ್ತು ಹಿಸುಕಿ, ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಮೃತ ದಂಪತಿ ಕಳೆದ ಮೂರು ವರ್ಷದ ಹಿಂದೆ ವಿವಾಹವಾಗಿದ್ದು, ಕೆ.ಆರ್.ಪೇಟೆಯ ಜಯನಗರ ಬಡಾವಣೆ ಮನೆಯೊಂದರಲ್ಲಿ ಬಾಡಿಗೆಗೆ ಇದ್ದರು. ಇಂದು (ಮಾ.9) ಬೆಳಿಗ್ಗೆ ಕೌಟುಂಬಿಕ ಕಲಹದಿಂದಾಗಿ ತಮ್ಮ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ನೇಣಿಗೆ ಶರಣಾಗಿದ್ದಾರೆ. ಅಸ್ವಸ್ಥಗೊಂಡಿದ್ದ ಮಗು ಬದುಕುಳಿದಿದೆ. ಈವರೆಗೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೆ.ಆರ್.ಪೇಟೆ ಟೌನ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Post a Comment

0 Comments