ಕುಂಬಳೆ : ಉಪ್ಪಳ ಪರಿಸರದಲ್ಲಿ ಅಮಾಯಕ ಹಿಂದೂ ಯುವಕರ ಮೇಲಿನ ಸುಳ್ಳು ಕೇಸು ದಾಖಲಾತಿಯ ವಿರುದ್ದ ಹಿಂದೂ ಸಮಾಜದ ಜಾಗೃತಿಗಾಗಿ ಕೇರಳದ ಹಿಂದೂ ಸಂಘಟನೆಯಾದ ಹಿಂದೂ ಐಕ್ಯ ವೇದಿಕೆ ವತಿಯಿಂದ ಇಂದು (ಮಾ. 9) ಸಂಜೆ 3ಗಂಟೆಗೆ ಕುಂಬಳೆಯಲ್ಲಿ ಹಿಂದೂ ಜನ ಜಾಗ್ರತಾ ಸಭೆ ನಡೆಯಲಿದೆ. ಈ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಸಂತ ಶ್ರೇಷ್ಠರು, ಹಿಂದೂ ಐಕ್ಯವೇದಿ ಜಿಲ್ಲಾ ಮತ್ತು ರಾಜ್ಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ತಿಳಿಸಿದ್ದಾರೆ.

0 Comments