Ticker

6/recent/ticker-posts

Ad Code

ಕುಂಬಳೆಯಲ್ಲಿ ಕೇಂದ್ರ ಸಚಿವ ಸುರೇಶ್ ಗೋಪಿ ಪ್ರಥಮಾಕ್ಷರ ಬರೆಯುವ ಮೂಲಕ ಪ್ರಚಾರದ ಉದ್ಘಾಟನೆ

 

ಕುಂಬಳೆ : ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಎನ್ ಡಿ  ಚುನಾವಣಾ ಪ್ರಚಾರದ ಅಂಗವಾಗಿ ಕೇಂದ್ರ ಸಚಿವ ಸುರೇಶ್ ಗೋಪಿಯವರು ಕುಂಬಳೆ ಪೇಟೆಯಲ್ಲಿ ಗೋಡೆಗೆ ಬಣ್ಣ ಹಚ್ಚುವ ಮೂಲಕ ವರ್ಣರಂಜಿತ ಪ್ರಚಾರಕ್ಕೆ ಚಾಲನೆ ನೀಡಿದರು.

ಮಂಜೇಶ್ವರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕೆ.ಸುರೇಂದ್ರನ್, ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ, ಎನ್.ಡಿ.ಎ.ಸಂಚಾಲಕ ವಿಜಯ್ ಕುಮಾರ್ ರೈ, ರಾಜ್ಯ ಸಮಿತಿ ಸದಸ್ಯರಾದ ವಿ.ರವೀಂದ್ರನ್, ಸುರೇಶ್ ಕುಮಾರ್ ಶೆಟ್ಟಿ, ಕುಂಬಳೆ ಮಂಡಲ ಸಮಿತಿ ಅಧ್ಯಕ್ಷ ಸುನಿಲ್ ಅನಂತಪುರ, ವಿಕ್ರಮ್ ಪೈ, ಸುಧಾಕರ ಕಾಮತ್, ಪ್ರೇಮಲತಾ ಎಸ್ ಮೊದಲಾದ ಮುಖಂಡರು ಉಪಸ್ಥಿತರಿದ್ದರು.

Post a Comment

0 Comments