ಬೆಳ್ಳೂರು: ಬಂಟ ಮಹಿಳಾ ಸಂಘ ಬೆಳ್ಳೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಕಾಸರಗೋಡು, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಬೆಳ್ಳೂರು ಸರಕಾರಿ ಶಾಲೆಯಲ್ಲಿ ಮಾ.8ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಉಚಿತ ಕಣ್ಣು ತಪಾಸಣಾ ಶಿಬಿರ ನಡೆಯಲಿದೆ. ಅಗತ್ಯ ಕಂಡು ಬರುವವರಿಗೆ ಕಾಸರಗೋಡು ಪ್ರಸಾದ್ ನೇತ್ರಾಲಯದಲ್ಲಿ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು.

0 Comments