Ticker

6/recent/ticker-posts

Ad Code

ಅತ್ಯಾಧುನಿಕ ರೀತಿಯ ಬಸ್ಸು ನಿಲ್ದಾಣ, ಬೋಳುಕಟ್ಟೆ ಮೈದಾನ ಸ್ಟೇಡಿಯಂ ನವೀಕರಣಕ್ಕೆ ಒತ್ತು ಕೊಟ್ಟ ಬದಿಯಡ್ಕದ ಮಿಗತೆ ಬಜೆಟ್

 

ಬದಿಯಡ್ಕ: ಬದಿಯಡ್ಕದಲ್ಲಿ ನವೀನ ಸೌಕರ್ಯವಿರುವ ಬಸ್ಸು ನಿಲ್ದಾಣ, ಬೋಳುಕಟ್ಟೆ ಸ್ಡೇಡಿಯಂನ ಆಧುನೀಕರಣ, ಕುಡಿಯುವ ನೀರು, ಕೃಷಿ, ರಸ್ತೆ ಸಹಿತ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬದಿಯಡ್ಕ ಗ್ರಾಮ ಪಂಚಾಯತು ಬಜೆಟ್ ಮಂಡಿಸಲಾಯಿತು. ಗ್ರಾಮ ಪಂಚಾಯತು ಉಪಾಧ್ಯಕ್ಷೆ ಅಶ್ವಿನಿ. ಕೆ.ಎಂ. ಅವರು 'ವಿಕಸಿತ ಬದಿಯಡ್ಕ' ದ್ಯೇಯವಾಕ್ಯದೊಂದಿಗೆ ಮಂಡಿಸಿದ ಬಜೆಟ್ ನಲ್ಲಿ 50,10,466,48 ರೂ ಆದಾಯ ಹಾಗೂ 43,15,17198 ರೂ ಖರ್ಚು ಅಂದಾಜಿರುವ ಬಜೆಟ್ ನಲ್ಲಿ  69529450 ರೂ ಉಳಿತಾಯ ಎಂದು ಅಂದಾಜಿಸಲಾಗಿದೆ. ಇದು ಬದಿಯಡ್ಕ ಗ್ರಾಮ ಪಂಚಾಯತಿನ ಮಟ್ಟಿಗೆ ಹೊಸ ಮೈಲುಗಲ್ಲಾಗಲಿದೆ.  ವಿವಿಧ ಹೊಳೆಗಳಿಗೆ ಅಣೆಕಟ್ಟು, ಹಿರಿಯರ ಮನೆ ಬಾಗಿಲಿಗೆ ಚಿಕಿತ್ಸೆ ಎಂಬಿವು ಬಜೆಟ್ ನ ಪ್ರಮುಖ ಅಂಶಗಳಾಗಿವೆ.

 ಗ್ರಾಮ ಪಂಚಾಯತು ಅಧ್ಯಕ್ಷ ಶಂಕರ.ಡಿ.ಅಧ್ಯಕ್ಷತೆ ವಹಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಹಮೀದ್ ಕೆಡೆಂಜಿ, ರಜನಿ ಸಂದೀಪ್, ಅವಿನಾಶ್ ವಿ.ರೈ, ಬ್ಲಾಕ್ ಜನಪ್ರತಿನಿಧಿಗಳಾದ ಎಂಎಸ್.ಮೊಯ್ದು, ಮಹೇಶ್ ವಳಕುಂಜ, ಖಾದರ್ ಮಾನ್ಯ, ಮಾಹಿನ್ ಕೇಳೋಟ್, ಶ್ಯಾಮ ಪ್ರಸಾದ್ ಮಾನ್ಯ, ಉದನೇಶ್ವರ ಬದಿಯಡ್ಕ, ನಾರಾಯಣ ಮಣಿಯಾಣಿ, ರಂಜಿತ್ ಪೊಯ್ಯಕಂಡ, ಸುಧಾಕರ ಬದಿಯಡ್ಕ, ಬಾಲಕೃಷ್ಣ ಶೆಟ್ಟಿ ಕಡಾರುಬೀಡು ಮೊದಲಾದವರು ಮಾತನಾಡಿದರು

Post a Comment

0 Comments