Ticker

6/recent/ticker-posts

Ad Code

ಕುಡಾಲು ಕನಕಪ್ಪಾಡಿ ತರವಾಡು ಮನೆಯಲ್ಲಿ ಹರಕೆಯ ನೇಮೋತ್ಸವ : ಹೊರೆ ಕಾಣಿಕೆ ಸಮರ್ಪಣೆ

 

ಬಂದ್ಯೋಡು : ಕುಡಾಲು ಕನಕಪ್ಪಾಡಿ ತರವಾಡು ಮನೆ ಹಾಗೂ ದೈವಚಾವಡಿಯ ಧೂಮಾವತಿ ಮತ್ತು ಪರಿವಾರ ದೈವಗಳ ಹರಕೆಯ ನೇಮೋತ್ಸವದಂಗವಾಗಿ ಕೋಡಿಂಗಾರು ಶಾಖೆಯ ವತಿಯಿಂದ ಹೊರೆ ಕಾಣಿಕೆ ಸಮರ್ಪಣೆ ಶುಕ್ರವಾರ ಪೂರ್ವಾಹ್ನ ಜರಗಿತು. ಇದರಂಗವಾಗಿ  ಗುರುವಾರ ಬೆಳಿಗ್ಗೆ ಗಣಪತಿ ಹೋಮ, ಬಳಿಕ  ದೈವಗಳಿಗೆ ತಂಬಿಲ ಸೇವೆ ಮತ್ತು ಮುಡಿಪು ಪೂಜೆ ರಾತ್ರಿ ಕಲ್ಲುರ್ಟಿ ಮತ್ತು ಕೊರತಿ ದೈವಕ್ಕೆ ಅಗೆಲು ಸೇವೆ ಜರಗಿತು.

ಇಂದು ವಿವಿಧ ತಂಡಗಳಿಂದ  ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ  ಭಂಡಾರ ಏರುವುದು, ರಾತ್ರಿ 8 ಗಂಟೆಗೆ ಮೈಸಂದಾಯ ದೈವದ ನೇಮ, ರಾತ್ರಿ 10 ಗಂಟೆಗೆ  ಅಣ್ಣಪ್ಪ ಪಂಜುರ್ಲಿ ದೈವದ ನೇಮ, ಮಾರ್ಚ್ 7ಕ್ಕೆ ಬೆಳಿಗ್ಗೆ 10-00 ಗಂಟೆಗೆ ಬಿರ್ನಾಳ ದೈವದ ನೇಮ, ಸಂಜೆ 6 ಗಂಟೆಗೆ ಕೊರತಿ ದೈವದ ಕೋಲ, ಸಂಜೆ 7-30 ಗಂಟೆಗೆ ಧೂಮಾವತಿ ದೈವದ ಮತ್ತು ಕುಪ್ಪೆಟ್ಟು ಪಂಜುರ್ಲಿ ಮತ್ತು ಕಲ್ಲುರ್ಟಿ ದೈವದ ಭಂಡಾರ ಏರುವುದು, ರಾತ್ರಿ 8-00 ಗಂಟೆಗೆ  ತೊಡಂಗಲ್, 9-30 ರಿಂದ ಕುಪ್ಪೆಟ್ಟು ಪಂಜುರ್ಲಿ ಮತ್ತು ಕಲ್ಲುರ್ಟಿ ದೈವದ ಕೋಲ, ಮಾರ್ಚ್ 8ಕ್ಕೆ ಬೆಳಿಗ್ಗೆ 8ಗಂಟೆಗೆ ಎಣ್ಣೆ ವೀಳ್ಯ ಕೊಡುವುದು, ಬೆಳಿಗ್ಗೆ 10 ಗಂಟೆಗೆ ಧೂಮಾವತಿ ದೈವದ ನೇಮ, ಮಧ್ಯಾಹ್ನ 12ಗಂಟೆಗೆ ಪ್ರಸಾದ ವಿತರಣೆ ನಂತರ ಅನ್ನದಾನ, ಸಂಜೆ 3ಗಂಟೆಗೆ ಗುಳಿಗ ದೈವದ ಕೋಲ, ಸಂಜೆ 4ಗಂಟೆಗೆ  ಭಂಡಾರ ಇಳಿಯುವುದರೊಂದಿಗೆ ನೇಮೋತ್ಸವ ಸಮಾಪ್ತಿಗೊಳ್ಳಲಿದೆ.

Post a Comment

0 Comments