Ticker

6/recent/ticker-posts

Ad Code

ಅಸ್ಸಾಂನಲ್ಲಿ ಸುಖೋಯ್ Su-30 ವಿಮಾನ ಪತನ – ಇಬ್ಬರು ವಾಯುಪಡೆಯ ಪೈಲಟ್‌ಗಳು ಹುತಾತ್ಮ

ದಿಸ್ಪುರ:  ರಾಡಾರ್ ಸಂಪರ್ಕದಿಂದ ಕಡಿತಗೊಂಡು ನಾಪತ್ತೆಯಾಗಿದ್ದ ಸುಖೋಯ್ 30 ಎಂಕೆಐ ಯುದ್ಧ ವಿಮಾನ ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಪತನಗೊಂಡು ಇಬ್ಬರು ಭಾರತೀಯ ವಾಯುಪಡೆಯ  ಪೈಲಟ್‌ಗಳು ಹುತಾತ್ಮರಾಗಿದ್ದಾರೆ. ಹುತಾತ್ಮರಾದ ಪೈಲಟ್‌ಗಳನ್ನು ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಎಂದು ಗುರುತಿಸಲಾಗಿದೆ ಎಂದು ವಾಯುಪಡೆ ತಿಳಿಸಿದೆ.  Su-30 MKI ತರಬೇತಿ ಕಾರ್ಯಾಚರಣೆಯಲ್ಲಿತ್ತು. ಜೋರ್ಹತ್ ವಾಯುನೆಲೆಯಿಂದ ಹಾರಿದ ಸ್ವಲ್ಪ ಸಮಯದ ನಂತರ ನಾಪತ್ತೆಯಾಗಿತ್ತು. ಅದು ಪತನಗೊಂಡ ಸ್ಥಳದಿಂದ ಸುಮಾರು 60 ಕಿ.ಮೀ ದೂರದಲ್ಲಿತ್ತು. ರಷ್ಯಾ ಮೂಲದ ವಿಮಾನದೊಂದಿಗಿನ ಸಂವಹನ ರಾತ್ರಿ 7:42 ಕ್ಕೆ ಕಡಿತಗೊಂಡಿತ್ತು.

Su-30MKI ರಷ್ಯಾದ ವಿಮಾನ ತಯಾರಕ ಸುಖೋಯ್ ಅಭಿವೃದ್ಧಿಪಡಿಸಿದ ಎರಡು ಆಸನಗಳ ಯುದ್ಧ ವಿಮಾನವಾಗಿದೆ. ಈಗ ಇದನ್ನು ಭಾರತೀಯ ವಾಯುಪಡೆಗೆ HAL ಪರವಾನಗಿ ಅಡಿಯಲ್ಲಿ ನಿರ್ಮಿಸಲಾಗಿದೆ. ಭಾರತೀಯ ವಾಯುಪಡೆಯಲ್ಲಿ 260 ಕ್ಕೂ ಹೆಚ್ಚು ಸುಖೋಯ್ 30 ಯುದ್ಧ ವಿಮಾನಗಳಿವೆ.

ಈ ಹಿಂದೆ ಜೂನ್ 2024 ರಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಸುಖೋಯ್ ಯುದ್ಧ ವಿಮಾನ ಪತನಗೊಂಡಿತ್ತು. ಮತ್ತೊಂದು ಸುಖೋಯ್-30 ಯುದ್ಧ ವಿಮಾನ ಜನವರಿ 2023 ರಲ್ಲಿ ಗ್ವಾಲಿಯರ್ ವಾಯುನೆಲೆಯಿಂದ ಟೇಕ್ ಆಫ್ ಆದ ನಂತರ ಪತನಗೊಂಡಿತ್ತು.



Post a Comment

0 Comments