ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತ್‌ನ 18ನೇ ವಾರ್ಡ್ ನಲ್ಕ ಪ್ರದೇಶದಲ್ಲಿ ತೀರಾ ಅವಗಣನೆಯಲ್ಲಿದ್ದ ಪಾಪಿತ್ತಡ್ಕ – ನೀರಮೂಲೆ – ಗುರಿನೇರೋಲು ರಸ್ತೆ ಡಾಮಾರೀಕರಣ ಕಾಮಗಾರಿಗೆ ರಾಜ್ಯಸಭಾ ಸದಸ್ಯೆ ಡಾ. ಪಿ.ಟಿ. ಉಷಾ ಅವರ MPLADS ನಿಧಿಯಿಂದ ₹ 30 ಲಕ್ಷ ರೂ ಮಂಜೂರು ಮಾಡಲಾಗಿದೆ.
ಕಾಸರಗೋಡು ಸಂಸದರು ಮತ್ತು ಮಂಜೇಶ್ವರ ಶಾಸಕರು ತಿರಸ್ಕರಿಸಿದ ಎಣ್ಮಕಜೆ ಗ್ರಾಮ ಪಂಚಾಯತ್‌ಗೆ ಈ ಯೋಜನೆಯನ್ನು ಮಂಜೂರು ಮಾಡಿರುವುದು ವಿಶೇಷವಾಗಿದ್ದು, ಸ್ಥಳೀಯ ಜನರಿಗೆ ಉತ್ತಮ ಸಂಚಾರ ಸೌಲಭ್ಯ ದೊರೆಯಲು ಇದು ಸಹಕಾರಿಯಾಗಲಿದ್ದು ಸಂಸದೆ ಡಾ. ಪಿ.ಟಿ. ಉಷಾ ಅವರು ಈ ಯೋಜನೆಯನ್ಬು ಮಂಜೂರು ಮಾಡುವಂತೆ ಒತ್ತಡ ಹೇರಿದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರಿಗೆ ಜನತೆ ಅಭಿನಂದನೆ ಸೂಚಿಸಿದ್ದಾರೆ.


0 Comments