ಪಳ್ಳಂ: ಮುಂಡಿತ್ತಡ್ಕ – ಬದಿಯಡ್ಕ ಮಾರ್ಗದಲ್ಲಿ ಹೊಸದಾಗಿ ಆರಂಭಿಸಿದ ಸೇಂಟ್ ಮೇರೀಸ್ ಬಸ್ ಸೇವೆಯನ್ನು ಎಣ್ಮಕಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಿದ್ದೀಕ್ ವಳಮುಗರ್ ಉದ್ಘಾಟಿಸಿದರು. ಪ್ರದೇಶದ ಪ್ರಯಾಣಿಕರ ಬಹುಕಾಲದ ಬೇಡಿಕೆಯಾಗಿದ್ದ ಈ ಸೇವೆ ಆರಂಭವಾಗಿರುವುದರಿಂದ ಸ್ಥಳೀಯರ ಪ್ರಯಾಣ ಸೌಲಭ್ಯ ಇನ್ನಷ್ಟು ಸುಲಭವಾಗಲಿದೆ ಎಂದು ಅವರು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಪುತಿಗೆ ಗ್ರಾಮ ಪಂಚಾಯತ್ ಸದಸ್ಯ ಮಜೀದ್ ಎಂ.ಎಚ್., ಲಲಿತಾ ಸಂತೋಷ್, ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯೆ ಹನ್ನತ್ ಬೀವಿ ಭಾಗವಹಿಸಿದರು. ಸ್ಥಳೀಯರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮುಂಡಿತ್ತಡ್ಕ– ಬದಿಯಡ್ಕ ಪ್ರದೇಶಗಳ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಈ ಹೊಸ ಬಸ್ ಸೇವೆ ದೊಡ್ಡ ಅನುಕೂಲವಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.

0 Comments