ಮಂಜೇಶ್ವರ: ಕೇರಳಂ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಕರ್ನಾಟಕದ ಶಾಸಕ ಡಾ.ಭರತ್ ಶೆಟ್ಟಿ ವಿರುದ್ಧ ಅಶ್ರಫ್ ಅವರು ಪ್ರಚೋದನಕಾರಿ ಹಾಗೂ ಕೋಮು ವಿಭಜಕ ಹೇಳಿಕೆ ನೀಡಿರುವುದರ ವಿರುದ್ಧ ಹಾಲಿ ಶಾಸಕ ಹಾಗೂ ಮುಸ್ಲಿಂ ಲೀಗ್‌ನ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ವಿರುದ್ಧ ಎನ್‌ಡಿಎ ಅಭ್ಯರ್ಥಿ ಕೆ ಸುರೇಂದ್ರನ್ ಅವರ ಚುನಾವಣಾ ಏಜೆಂಟ್ ಚುನಾವಣಾಧಿಕಾರಿಯ ಮುಂದೆ ದೂರು ದಾಖಲಿಸಿದ್ದಾರೆ. ಎಕೆಎಂ ಅಶ್ರಫ್ ಯೂಟ್ಯೂಬ್ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಂಗಳೂರಿನಲ್ಲಿ ನಡೆದ ಕೊಲೆಯೊಂದಕ್ಕೆ ಡಾ.ಭರತ್ ಶೆಟ್ಟಿ ಕಾರಣ ಎಂದು ಸುರೇಂದ್ರನ್ ದೂರಿದ್ದಾರೆ. ಪೊಲೀಸರು ಹತ್ಯೆಯ ತನಿಖೆ ನಡೆಸಿ ನೈಜ ಆರೋಪಿಗಳ ವಿರುದ್ಧ ಕರ್ನಾಟಕದಲ್ಲಿ ಚಾರ್ಜ್ ಶೀಟ್ ಬಿಡುಗಡೆ ಮಾಡಿದರು. ಡಾ.ಭರತ್ ಹೇಳಿದ ಘಟನೆಗೂ ಯಾವುದೇ ಸಂಬಂಧವಿಲ್ಲ. ಅಶ್ರಫ್ ಅವರು ಮಂಜೇಶ್ವರದ ಮತದಾರರಲ್ಲಿ ಧರ್ಮದ ಹೆಸರಿನಲ್ಲಿ ಮತೀಯವಾದವನ್ನು ಹುಟ್ಟುಹಾಕಲು ಮಾತನಾಡಿದ್ದಾರೆ ಎಂದು ಕೆ. ಸುರೇಂದ್ರನ್ ದೂರಿನಲ್ಲಿ ತಿಳಿಸಿದ್ದಾರೆ.

0 Comments