Ticker

6/recent/ticker-posts

Ad Code

ಒಂದೂವರೆ ವರ್ಷದ ಮಗುವಿನೊಂದಿಗೆ ತಾಯಿಯ ಮೃತದೇಹ ಬಾವಿಯಲ್ಲಿ ಪತ್ತೆ


 ಮಲಪ್ಪುರ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವತಿಯೋರ್ವಳು ತನ್ನ ಒಂದೂವರೆ ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ತಾಯಿ ಮತ್ತು ಮಗು ಮೃತದೇಹ ಪತ್ತೆಯಾಗಿದೆ. ಎಝೂರ್ ಮೂಲದ ಇರ್ಫಾನಾ (30) ಮತ್ತು ಅವರ ಒಂದೂವರೆ ವರ್ಷದ ಮಗ ಅತನ್ ಮಲಿಕ್ ಮೃತದೇಹ ಇದೆಂದು ಗುರುತಿಸಲಾಗಿದೆ. ಇರ್ಫಾನಾ ಅವರ ಕೊಠಡಿಯಿಂದ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ಶವಗಳನ್ನು ತಿರುರ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. 
ಕೋಝಿಕ್ಕೋಡ್ ಮೂಲದ ಇರ್ಫಾನಾ ಅವರ ಪತಿ ರಫಿ ವಿದೇಶದಲ್ಲಿದ್ದಾರೆ. ಇರ್ಫಾನಾ ಅವರ ತಂದೆ ಮಸೀದಿಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಇರ್ಫಾನಾ ಅವರ ತಾಯಿ ನಾಲ್ಕು ತಿಂಗಳ ಹಿಂದೆ ನಿಧನರಾದರು. ತಾಯಿಯ ಮರಣದ ನಂತರ ಮಹಿಳೆ ತೀವ್ರ ಮಾನಸಿಕ ತೊಂದರೆಯಲ್ಲಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಅವರು ತಮ್ಮ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Post a Comment

0 Comments