ಕಾಸರಗೋಡು : ನೀರ್ಚಾಲು ಬಳಿಯ ಕಿಳಿಂಗಾರು ನೆಡುಮನೆಯಲ್ಲಿ ವಸಿಷ್ಠ ಪೀಠ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಕರ್ನಾಟಕ ಮಾನವ ಹಕ್ಕು ಆಯೋಗ ಸದಸ್ಯ ಡಾ.ಟಿ.ಶ್ಯಾಮ ಭಟ್ ಉದ್ಘಾಟಿಸಿದರು. ವೈದಿಕ ವಿದ್ವಾಂಸ ವೇದಮೂರ್ತಿ ಮಿತ್ತೂರು ಸದಾಶಿವ ಭಟ್ ಅವರಿಗೆ ಪ್ರಶಸ್ತಿ ಪ್ರದಾನ, ಡಾ.ಕೆ.ವಿ.ಶ್ರೀರಾಮ ದಂಪತಿಗೆ ಅಭಿನಂದನೆ ಮತ್ತು ಪ್ರತಿಭಾವಂತ ವೈದಿಕ ವಿದ್ಯಾರ್ಥಿ ಸುಶಾಂತ್ ಶ್ರೀಕಾಂತ್ ಭಟ್ ಅವರಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಹಿರಿಯ ಕವಿ ಡಾ.ರಮಾನಂದ ಬನಾರಿ, ವೇದಮೂರ್ತಿ ಹಿರಣ್ಯ ವೆಂಕಟೇಶ ಭಟ್ ಅಭಿನಂದನಾ ಭಾಷಣ ಮಾಡಿದರು. ಧಾರ್ಮಿಕ ಮುಂದಾಳು ದೇಲಂಪಾಡಿ ಗಣೇಶ ತಂತ್ರಿ ಮುಖ್ಯ ಅತಿಥಿಯಾಗಿದ್ದರು. ಪಳ್ಳತ್ತಡ್ಕ ಸುಬ್ರಹ್ಮಣ್ಯ ಭಟ್, ಪತ್ತಡ್ಕ ಗಣಪತಿ ಭಟ್, ಕಾಂಚನ ಗಂಗಾ ಇದ್ದರು. ವೇದಮೂರ್ತಿ ನೆಡುಮನೆ ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಪತ್ರಕರ್ತ ವೀಜಿ. ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ಭಟ್ ನೆಡುಮನೆ ವಂದಿಸಿದರು.

0 Comments