ಧರ್ಮತ್ತಡ್ಕ: 2025-26ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಗೆ ನೂರು ಶೇ. ಫಲಿತಾಂಶ ಲಭಿಸಿದೆ. ಒಟ್ಟು 240 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲ ವಿದ್ಯಾಥಿಗಳು ಉತ್ತೀರ್ಣರಾಗಿದ್ದಾರೆ. ಹನ್ನೆರಡು ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳಲ್ಲಿ ಎಪ್ಲಸ್ ಗ್ರೇಡ್ ಲಭಿಸಿದೆ. ಆತ್ಮಿಕ ಎ., ಆತ್ಮಿಕ ಜಿ. ಯು., ಭುವನ್ ಎ., ಈಶನ್ ಶರ್ಮ ಕೆ., ಹಂಶಿಕ, ಖದೀಜ ಸಫ, ಪ್ರಜಕ್ತ ಜೆ. ಕಯ್ಯಾರ್, ಸಮರ್ಥ್, ಸಮೀಕ್ಷಾ, ಶಮಿಕ, ಶ್ರೇಯಸ್ ವಿ. ಎಸ್., ತನ್ವಿ ಎಂಬೀ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳಲ್ಲಿ ಎಪ್ಲಸ್ ಗ್ರೇಡ್ ಲಭಿಸಿದೆ.
ಐದು ವಿದ್ಯಾರ್ಥಿಗಳಿಗೆ ಒಂಬತ್ತು ವಿಷಯಗಳಲ್ಲಿ ಎಪ್ಲಸ್ ಹಾಗೂ ಒಂದು ಎ ಲಭಿಸಿದೆ. ಏಳು ವಿದ್ಯಾರ್ಥಿಗಳಿಗೆ ಎಂಟು ವಿಷಯಗಳಲ್ಲಿ ಎಪ್ಸಸ್ ಲಭಿಸಿದೆ. ವಿದ್ಯಾರ್ಥಿಗಳ ಸಾಧನೆಯನ್ನು ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರಿ, ರಕ್ಷಕ ಶಿಕ್ಷಕ ಸಂಘ ಅಭಿನಂದಿಸಿದೆ.

0 Comments