Ticker

6/recent/ticker-posts

Ad Code

ಮೇ 30ಕ್ಕೆ ಅನಂತಪುರ ರಕ್ಷಾ ಸಮಿತಿಯಿಂದ ಸಮಾಲೋಚನಾ ಸಭೆ


ಕುಂಬಳೆ : ಅನಂತಪುರ ಕ್ಷೇತ್ರ ರಕ್ಷಾ ಸಮಿತಿ ವತಿಯಿಂದ ಅನಂತಪುರ ದೇವಸ್ಥಾನ ಪ್ರದೇಶದಲ್ಲಿ ದುರ್ನಾತ ಬೀರುವ ಹಾಗೂ ಮಲಿನ ಜಲ ಹೊರಬಿಡುವ ಕಾರ್ಖಾನೆಗಳ ವಿರುದ್ಧ ಮೇ 31ರಂದು ಆದಿತ್ಯವಾರ ಸಂಜೆ 3.00 ಗಂಟೆಗೆ ಶ್ರೀ ಅನಂತಪದ್ಮನಾಭ ಸ್ವಾಮೀ ದೇವಸ್ಥಾನದ ಪರಿಸರದಲ್ಲಿ ಸಮಾಲೋಚನಾ ಸಭೆ  ಜರಗಲಿದೆ.

ಕೇರಳದ ಉತ್ತರ ತುದಿಯಲ್ಲಿರುವ ಅತ್ಯಂತ ಪುರಾತನವಾದ ಮತ್ತು ಪಾವನವಾದ ಹಾಗೂ ವಿಶ್ವಪ್ರಸಿದ್ಧ ತಿರುವನಂತಪುರ ಶ್ರೀ ಅನಂತಪದ್ಮನಾಭ ಸ್ವಾಮೀ ಕ್ಷೇತ್ರದ ಮೂಲಸ್ಥಾನವಾದ ಸರೋವರ ಕ್ಷೇತ್ರ ಶ್ರೀ ಅನಂತಪದ್ಮನಾಭ ಸ್ವಾಮೀ ದೇವರ ದಿವ್ಯ ಸನ್ನಿಧಾನವಿರುವ ಅನಂತಪುರದ  ಶ್ರೀದೇವರ ಸನ್ನಿಧಿಯ ಸುತ್ತ ಹರಡಿರುವ ವಿಶಾಲ ಸರೋವರದಲ್ಲಿ ವಿಹರಿಸುವ ಏಕೈಕ ಮೊಸಳೆ ನಿಜಕ್ಕೂ ಅದ್ಭುತವೇಸರಿ.

ದಿನನಿತ್ಯ ಊರ ಪರವೂರಿನ ನೂರಾರು ಭಕ್ತರು ಶ್ರದ್ದಾಭಕ್ತಿಯಿಂದ ಬಂದು ಸೇರುವ ಈ ದೇವಸ್ಥಾನದ ಪರಿಸರಕ್ಕೆ ಮಾತ್ರವಲ್ಲ ಸಮೀಪದ ಸುಮಾರು ಮೂರು ಕಿಲೋಮೀಟರ್ ದೂರದ ಪ್ರದೇಶದವರೆಗೆ ದುರ್ನಾತ ಬೀರುವ ಕಾರ್ಖಾನೆಗಳು ಶ್ರೀ ಕ್ಷೇತ್ರದ ಸನಿಹದಲ್ಲಿಯೇ ಹಗಲಿರುಳೆನ್ನದೆ ಕಾರ್ಯವೆಸಗುತ್ತಿರುವುದರಿಂದ ಕ್ಷೇತ್ರ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದೆ, ಸಮೀಪದ ಜಲಮೂಲಗಳು ಕಲುಷಿತಗೊಂಡಿವೆ ಮಾತ್ರವಲ್ಲ ಮುಂದಿನ ದಿನಗಳಲ್ಲಿ ಶ್ರೀಕ್ಷೇತ್ರದ ಸರೋವರಕ್ಕೂ ಇದರ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಕೇರಳ ಸರಕಾರದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಒಪ್ಪಿಗೆಯನ್ನು ಯಾವುದೋ ರೀತಿಯಲ್ಲಿ ಗಳಿಸಿಕೊಂಡು ಈ ಕಾರ್ಖಾನೆ ಪ್ರವೃತ್ತವಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಸರಿಯಾದ ದಾರಿಯಲ್ಲಿ ಅದಕ್ಕೆ ಪರವಾನಿಗೆ ಸಿಗಲು ಸಾಧ್ಯವೇ ಇಲ್ಲ. ಈ ಕಾರ್ಖಾನೆಯ ದುರ್ನಾತದಿಂದಾಗಿ ದೇವಸ್ಥಾನಕ್ಕೆ ಬರುವವರೂ ಪರಿಸರವಾಸಿಗಳೂ ಪಡುವ ಪಾಡು ಅಷ್ಟಿಷ್ಟಲ್ಲ. ಅದನ್ನು ಪರಿಹರಿಸುವುದಕ್ಕಾಗಿ ಬಹಳಷ್ಟು ಮಂದಿ ಬೇರೆಬೇರೆ ರೀತಿಯಲ್ಲಿ ಸರಕಾರದ ವಿವಿಧ ಹಂತದ ಅಧಿಕಾರಿಗಳಿಗೆ ದೂರು ನೀಡಿದರೂ, ಪ್ರತಿಭಟನೆ ನಡೆದಿದ್ದರೂ ಕಾರ್ಖಾನೆ ಅವ್ಯಾಹತವಾಗಿ ಕಾರ್ಯವೆಸಗುತ್ತಲೇ ಇದೆ. ಇದನ್ನು ಇಲ್ಲದಂತೆ ಮಾಡಬೇಕಾದರೆ ಜನಸಾಗರವೇ ಸೇರಿ ಬಹುದೊಡ್ಡ ಆಂದೋಲನದ ಮೂಲಕ ಸರಕಾರಕ್ಕೆ ಮನವರಿಕೆ ಮಾಡಿಕೊಡುವ ದೊಡ್ಡ ಹೊಣೆಗಾರಿಕೆ ಇದೆ

ಅಂತಹ ಗುರುತರವಾದ ಕಾರ್ಯಕ್ಕಾಗಿ ಒಂದು ಸಕ್ರಿಯವಾದ ಮತ್ತು ಸಶಕ್ತವಾದ ಭಕ್ತಜನರ ಸಮಿತಿಯನ್ನು ರೂಪಿಸುವ ಬಗ್ಗೆ ಸಮಾಲೋಚನೆ ನಡೆಸುವುದಕ್ಕಾಗಿ ಎಲ್ಲಾ ಭಕ್ತ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ.

Post a Comment

0 Comments