Ticker

6/recent/ticker-posts

Ad Code

ಪೆರ್ಲ ಇಡಿಯಡ್ಕದಿಂದ ಶೇಣಿ ಮಣಿಯಂಪಾರೆವರೆಗೆ ರಸ್ತೆ ಬದಿ ತ್ಯಾಜ್ಯ ಎಸೆಯುವವರ ವಿರುದ್ಧ ತೀವ್ರ ಕ್ರಮ : ವಿಡಿಯೋ ಪೋಟೋ ಸೆರೆ ಹಿಡಿದವರಿಗೆ ವಿಶೇಷ ಬಹುಮಾನ ಘೋಷಣೆ

ಪೆರ್ಲ‌: ಎಣ್ಮಕಜೆ ಪಂಚಾಯತಿನ ಪೆರ್ಲ ಇಡಿಯಡ್ಕದಿಂದ ಶೇಣಿ ಮಣಿಯಂಪಾರೆವರೆಗೆ ರಸ್ತೆ ಬದಿ ತ್ಯಾಜ್ಯ ಎಸೆಯುವವರ ವಿರುದ್ಧ ತೀವ್ರ ಕ್ರಮಕ್ಕೆ ಪಂಚಾಯತ್ ಶುಚಿತ್ವ ಸಮಿತಿ ಮುಂದಾಗಿದೆ. ಈ  ರಸ್ತೆಯ ಎರಡೂ ಬದಿಗಳಲ್ಲಿ ತ್ಯಾಜ್ಯ ಸುರಿಯುವವರ ಸಂಖ್ಯೆ ಅಧಿಕವಾಗಿದ್ದು, ಇತ್ತೀಚೆಗೆ ಪಂಚಾಯತ್ ಶುಚಿತ್ವ ಸಮಿತಿ ಹಾಗೂ ಹರಿತಕರ್ಮ, ಆರೋಗ್ಯ ಇಲಾಖೆಯು ಜಂಟಿಯಾಗಿ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಕೆಲವು ಮನೆಗಳಲ್ಲಿ ಉಪಯೋಗಿಸಿ ಎಸೆದ ವಸ್ತುಗಳಲ್ಲದೆ ಪೇಟೆಯ ಕೆಲವು ಅಂಗಡಿಗಳ ಮಾಲೀಕರು ಈ ದಾರಿಯಾಗಿ ತೆರಳುವಾಗ ತ್ಯಾಜ್ಯ ಉಪೇಕ್ಷಿಸಿರುವುದು ಕಂಡು ಬಂದಿದೆ. ಇದನ್ಮು ಪತ್ತೆಹಚ್ಚಲು ಪಂಚಾಯತ್ ಮತ್ತು ಜಿಲ್ಲಾ ಜಾರಿ ದಳ ಕಣ್ಗಾವಲು ತೀವ್ರಗೊಳಿಸಿದೆ. ನಿಯಮ ಉಲ್ಲಂಘಿಸುವವರು ಕಂಡುಬಂದರೆ 5,000 ದಿಂದ 50,000 ರೂ.ಗಳವರೆಗೆ ದಂಡ ವಿಧಿಸಲಾಗುವುದು ಹಾಗೂ ತ್ಯಾಜ್ಯ ಉಪೇಕ್ಷಿಸುವವರ ವಿಡಿಯೋ ಅಥವ ಪೋಟೊ ತೆಗೆದು ನೀಡಿದವರಿಗೆ ವಿಶೇಷ ಬಹುಮಾನ ನೀಡಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

Post a Comment

0 Comments