Ticker

6/recent/ticker-posts

Ad Code

ಕೇರಳದ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಆಯ್ಕೆ : ಬದಿಯಡ್ಕದಲ್ಲಿ ವಿಜಯೋತ್ಸವ

 

ಬದಿಯಡ್ಕ :  ಕೇರಳದ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಘೋಷಣೆಯಾದ ಹಿನ್ನೆಲೆಯಲ್ಲಿ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ವಿಜಯೋತ್ಸವ  ನಡೆಯಿತು. ಜೋರು ಮಳೆಯ ನಡುವೆಯೂ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿದರು. 

ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ, ಹಿರಿಯ ಕಾಂಗ್ರೆಸ್ ಮುಖಂಡರಾದ ಪಿ.ಜಿ.ಚಂದ್ರಹಾಸ ರೈ, ತಿರುಪತಿ ಕುಮಾರ್ ಭಟ್, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ, ಗ್ರಾ.ಪಂ.ಸದಸ್ಯರಾದ ಗಂಗಾಧರ ಗೋಳಿಯಡ್ಕ, ಅಶ್ವತಿ, ಲೀಲಾವತಿ, ಮುಖಂಡರಾದ ರಾಮ ಪಟ್ಟಾಜೆ, ನಾರಾಯಣ ಭಂಡಾರಿ, ಲೋಹಿತಾಕ್ಷನ್ ಪಟ್ಟಾಜೆ, ಕುಮಾರನ್ ನಾಯರ್, ಜಿ.ಕೃಷ್ಣ, ಪಿ.ಪಟ್ಟಾಜೆ, ಜಿ. ಉದಯ ಕುಂಟಾಲುಮೂಲೆ, ಸತೀಶ್ ಪೆರ್ಮುಂಡ, ಖಮರುದ್ದೀನ್, ವಿನ್ಸೆಂಟ್ ವಿದ್ಯಾಗಿರಿ, ಶಾಫಿ ಗೋಳಿಯಡ್ಕ, ಸುಂದರ, ಶಾಫಿ ಗೋಳಿಯಡಿ, ಅಪ್ಪು ನಾಯ್ಕ್, ಶರತ್, ಶ್ರೀಜಿತ್, ಶ್ರೇಯಸ್ ಮೊದಲಾದವರು ನೇತೃತ್ವ ವಹಿಸಿದ್ದರು.

Post a Comment

0 Comments