ಬದಿಯಡ್ಕ : ನೀರ್ಚಾಲು ಸಮೀಪದ ಕಿಳಿಂಗಾರ್ ಶ್ರೀ ಏಕಲವ್ಯ ಬಾಲಗೋಕುಲದಲ್ಲಿ ಉಚಿತ ಪುಸ್ತಕ ವಿತರಣೆ ನಡೆಯಿತು. ಸ್ಥಳೀಯ ಯುವಕ ಸಂಘಟನೆಯಾದ ಯುವಕೇಸರಿ ಕಿಳಿಂಗಾರ್ ಮತ್ತು ಬಾಲಗೋಕುಲ ಸಮಿತಿಯ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಿಳಿಂಗಾರಿನ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಗೋಕುಲದ ಎಲ್ಲಾ 61 ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು.
ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದರ್ಬೆತಡ್ಕ ಶಂಕರ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿತು. ಕಿಳಿಂಗಾರ್ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಭಟ್ ಪೆರ್ವ, ಶ್ರೀಪತಿ ಮತ್ತು ಯುವಕೇಸರಿ ಕ್ಲಬ್ಬಿನ ಹಿರಿಯ ಸದಸ್ಯ ಸಂತೋಷ್ ಬೇರಿಗೆ ಉಪಸ್ಥಿತರಿದ್ದರು. ಪುಸ್ತಕ ವಿತರಣಾ ಯೋಜನಾ ಪ್ರಮುಖ್ ಕಿಶನ್ ರಾಜ್ ಕಿಳಿಂಗಾರ್ ಸ್ವಾಗತಿಸಿ, ಬಾಲಗೋಕುಲ ಪ್ರಮುಖ್ ಮನೋಜ್ ಕಿಳಿಂಗಾರ್, ಬಾಲಗೋಕುಲ ಸಮಿತಿ ಹಾಗೂ ಯುವಕೇಸರಿ ಕ್ಲಬ್ಬಿನ ಸದಸ್ಯರಾದ ಜಯರಾಜ್ ಪೆರಿಯಡ್ಕ, ರಕ್ಷಿತ್ ಕೆ, ಪ್ರಮೋದ್ ಎಂ, ಶ್ರೀಜಿತ್ ವಿ ಕೆ, ಅಧೇಶ್, ಉದಯ ಬೇರಿಗೆ ಮೊದಲಾದವರು ಸಹಕರಿಸಿದರು. ಯಜ್ಞೇಶ್ ಕಿಳಿಂಗಾರ್ ನಿರೂಪಿಸಿದರು.

0 Comments