Ticker

6/recent/ticker-posts

Ad Code

ವಿದೇಶ ಉದ್ಯೋಗದ ರಜೆಯ ನಡುವೆ ಪತ್ನಿ ಮನೆಗೆ ಬಂದಾಗ ವಿದ್ಯುತ್ ಶಾಕ್ ಹೊಡೆದು ಯುವಕ ಮೃತ್ಯು

 

ಪುತ್ತೂರು : ಪತ್ನಿ ಇಬ್ಬರು ಮಕ್ಕಳೊಂದಿಗೆ  ಮಾವನ ಮನೆಗೆ ಬಂದ ಯುವಕನೋರ್ವನಿಗೆ ವಿದ್ಯುತ್‌ ಶಾಕ್ ಹೊಡೆದು ನೆಲಕ್ಕೆ ಬಿದ್ದು ಸಾವನ್ನಪ್ಪಿದ ದುರ್ಘಟನೆ ಪುತ್ತೂರು ಸಮೀಪದ ನಿಡ್ಪಳ್ಳಿ ಗ್ರಾಮದ ಬೋಳುಂಬುಡೆಯಲ್ಲಿ ಸಂಭವಿಸಿರುವುದಾಗಿ ವರದಿಯಾಗಿದೆ. ಮೃತ ಯುವಕ ಬೇಲೂರಿನ ಅಂಕಿಹಳ್ಳಿ ನಿವಾಸಿ ಜೋಕಿಂ ಪಿಂಟೋ ಅವರ ಪುತ್ರ ರೋಶನ್ ಪಿಂಟೋ (29) ಎಂದು ಗುರುತಿಸಲಾಗಿದೆ. ಮೇ 24ರ ರಾತ್ರಿ  ಜೋಕಿಂ ಅವರು ಪತ್ನಿ ಇಬ್ಬರು ಮಕ್ಕಳೊಂದಿಗೆ ಅವರ ಮಾವನ ಮನೆ ನಿಡ್ಪಳ್ಳಿಯ ಬೋಳುಂಬುಡೆಗೆ ಬಂದಿದ್ದಾಗ ಈ ಘಟನೆ ನಡೆದಿದೆ. ರೋಶನ್ ರಾತ್ರಿ ಸ್ಥಾನ ಮುಗಿಸಿ ಬಟ್ಟೆ ಒಗೆಯುವ ಸ್ಥಳಕ್ಕೆ ಹೋದಾಗ ಅಲ್ಲಿದ್ದ ವಿದ್ಯುತ್ ವಯರ್ ನಿಂದ ಶಾಕ್ ಹೊಡೆದು ನೆಲಕ್ಕೆ ಬಿದ್ದಿರುವುದಾಗಿ ತಿಳಿದುಬಂದಿದೆ. ಗಂಭೀರ ಗಾಯಗೊಂಡ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತರು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ರಜೆಯಲ್ಲಿ ಊರಿಗೆ ಬಂದಿದ್ದರು.

Post a Comment

0 Comments