ಕಾಸರಗೋಡು : ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು ಇದರ ಕೇಂದ್ರ ಸಮಿತಿಯ ಮಹಾಸಭೆಯು ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಸಮಿತಿಯ ಅಧ್ಯಕ್ಷ ಸುಕೇಶ್ ಎ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಶರತ್ ಕುಮಾರ್ ಲೆಕ್ಕಪತ್ರ ಮಂಡಿಸಿದರು. ಬಳಿಕ ಸಂಘಟನಾತ್ಮಕ ಚರ್ಚೆ ನಡೆಯಿತು. ಕುಂಬಳೆ ಉಪಜಿಲ್ಲಾ ಅಧ್ಯಕ್ಷ ಹರ್ಷ ಎಂ. ಪಿ, ಬೇಕಲ-ಹೊಸದುರ್ಗ ಉಪಜಿಲ್ಲಾ ಸಮಿತಿಯ ಅಧ್ಯಕ್ಷ ವಿಠಲ ಅಡ್ವಳ, ಕಾಸರಗೋಡು ಉಪಜಿಲ್ಲಾ ಅಧ್ಯಕ್ಷ ಕುಶ ಪಿ.ಎಲ್, ಕಾರ್ಯದರ್ಶಿ ಪೂರ್ಣಿಮಾ ಯಂ,ಕೋಶಾಧಿಕಾರಿ ಸುರೇಖಾ ಕೆ ಮಂಜೇಶ್ವರ ಉಪಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಎಂ, ಕೋಶಾಧಿಕಾರಿ ಕಿಶೋರ್ ಕುಮಾರ್ ಚರ್ಚೆಯಲ್ಲಿ ಭಾಗವಹಿಸಿದರು. ಕೇಂದ್ರ ಸಮಿತಿಯ ಉಪಾಧ್ಯಕ್ಷೆ ಶ್ರೀಲತಾ ಕೆ, ಕಾರ್ಯದರ್ಶಿಗಳಾದ ಜಯಪ್ರಶಾಂತ್ ಪಾಲೆಂಗ್ರಿ, ಪ್ರದೀಪ್ ಕೆ.ವಿ ಉಪಸ್ಥಿತರಿದ್ದರು.
ಬಳಿಕ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜಿ.ಡಬ್ಲ್ಯೂ.ಎಲ್.ಪಿ.ಶಾಲೆ ಮಂಜೇಶ್ವರದ ಮುಖ್ಯ ಶಿಕ್ಷಕ ಸುಕೇಶ್, ಪ್ರಧಾನ ಕಾರ್ಯದರ್ಶಿಯಾಗಿ ಎ.ಎಲ್.ಪಿ.ಶಾಲೆ ಕಿಳಿಂಗಾರಿನ ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ ಪುನರಾಯ್ಕೆಯಾದರೆ, ಕೋಶಾಧಿಕಾರಿಯಾಗಿ ಎ.ಯು.ಪಿ ಶಾಲೆ ಬೋವಿಕ್ಕಾನದ ಪ್ರದೀಪ್ ಕೆ.ವಿ ಜತೆ ಕೋಶಾಧಿಕಾರಿಯಾಗಿ ಎ.ಎಸ್.ಬಿ.ಎಸ್.ಕುಂಟಿಕಾನದ ಶಿಕ್ಷಕ ಶರತ್ ಕುಮಾರ್ ಯಂ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಕೂಡ್ಲು ಶಾಲೆಯ ಶಿಕ್ಷಕಿ ಶ್ರೀಲತಾ ಕೆ, ವಿದ್ಯಾರಣ್ಯ ಎ.ಎಲ್.ಪಿ. ಶಾಲೆ ಬೆರಿಪದವಿನ ಮುಖ್ಯ ಶಿಕ್ಷಕ ಉಮೇಶ್ ಕೆ,ಇಚ್ಲಂಗೋಡು ಶಾಲಾ ಮುಖ್ಯ ಶಿಕ್ಷಕ ಜಯರಾಮು ಸಿ. ಎಚ್, ಚಂದ್ರಗಿರಿ ಶಾಲಾ ಮುಖ್ಯ ಶಿಕ್ಷಕಿ ಯಶೋದಾ, ಕಾರ್ಯದರ್ಶಿಗಳಾಗಿ ಜಿ.ಎಲ್.ಪಿ.ಶಾಲೆ ಕುಳೂರಿನ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ, ಕಾರಡ್ಕ ಶಾಲೆಯ ಶಿಕ್ಷಕ ಡಾ. ಶ್ರೀಶ ಕುಮಾರ್ ಪಂಚಿತ್ತಡ್ಕ, ಆನೆಕಲ್ಲು ಶಾಲೆಯ ಶಿಕ್ಷಕ ಜೀವನ್ ಕುಮಾರ್ , ಬೆಳ್ಳೂರು ಶಾಲೆಯ ಶಿಕ್ಷಕ ನವೀನ್ ಕುಮಾರ್ ಪಿ , ಸಂಘಟನಾ ಕಾರ್ಯದರ್ಶಿಯಾಗಿ ಜಿ.ಡಬ್ಲ್ಯೂ.ಎಲ್.ಪಿ.ಶಾಲೆ ಮಂಜೇಶ್ವರದ ಶಿಕ್ಷಕ ಜಬ್ಬಾರ್ ಬಿ, ಅಧಿಕೃತ ವಕ್ತಾರರಾಗಿ ಜಿ.ಎಚ್.ಎಸ್.ಎಸ್.ಬಂದಡ್ಕದ ಶಿಕ್ಷಕ ಬಾಬು ಕೆ, ಲೆಕ್ಕ ಪರಿಶೋಧಕರಾಗಿ ಜಿ.ಎಲ್.ಪಿ.ಶಾಲೆ ಪನೆಯಾಲದ ಶಿಕ್ಷಕ ಪುರುಷೋತ್ತಮ ಕುಲಾಲ್ ಹಾಗೂ ಜಿ.ಎಚ್.ಎಸ್.ಎಸ್. ಕಾಸರಗೋಡಿನ ಶಿಕ್ಷಕ ಅಬ್ದುಲ್ ರಹಿಮಾನ್ ಅವಿರೋಧವಾಗಿ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರದೀಪ್ ಕೆ.ವಿ ವಂದಿಸಿದರು. ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು.

0 Comments