ಬೆಳ್ಳೂರು : ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ನಿವೃತ್ತ ಗುಮಾಸ್ತ, ಕಿನ್ನಿಂಗಾರು ಸಮೀಪದ ಕೂಳೂರು ನಿವಾಸಿ ಶಂಕರನಾರಾಯಣ ಭಟ್ (80) ಗುರುವಾರ ನಿಧನರಾದರು. ಅವರಿಗೆ ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ.
ಕುಕ್ಕುಪುಣಿ ಗೋವಿಂದ ಭಟ್ ಮತ್ತು ಜೋಗಿಮೂಲೆ ಗೌರಿ ದಂಪತಿ ಪುತ್ರನಾಗಿರುವ ಇವರು ಪಂಜ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ದೂರ ಶಿಕ್ಷಣ ಮೂಲಕ ಪದವಿಪೂರ್ವ ಮತ್ತು ಪದವಿ ಶಿಕ್ಷಣ ಪಡೆದಿದ್ದರು. ನವೋದಯ ಪ್ರೌಢಶಾಲೆ ಆರಂಭದಿಂದ 2006ರವರೆಗೆ 46 ವರ್ಷಗಳ ಸುದೀರ್ಘ ಕಾಲ ಗುಮಾಸ್ತರರಾಗಿ ಕರ್ತವ್ಯ ನಿರ್ವಹಿಸಿದ್ದರು.

0 Comments