Ticker

6/recent/ticker-posts

Ad Code

ಮೇ 16ರಿಂದ ಅಮೃತಧಾರಾ ಗೋಶಾಲೆಯಲ್ಲಿ ಶನಿ ನಮನ - ತಾಪ ಶಮನ ಕಾರ್ಯಕ್ರಮ

 

ಪೆರ್ಲ : ಶನಿಜಯಂತಿಯ ಪುಣ್ಯಪರ್ವದ ಅಂಗವಾಗಿ ಗೋಕರ್ಣ ಮಂಡಲಾಧೀಶ್ವರ ಶ್ರೀರಾಘವೇಶ್ವರ ಭಾರತೀ ಸ್ವಾಮಿಜಿಗಳ ಮಾರ್ಗದರ್ಶನದಲ್ಲಿ ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಮೇ 16ರಿಂದ ಶನಿ ನಮನ – ತಾಪ ಶಮನ ಕಾರ್ಯಕ್ರಮ ನಡೆಯಲಿದೆ‌.

ಮೇ 16ರಂದು ಮುಂಜಾನೆ 4.30ಕ್ಕೆ ಗುರು ವಂದನೆ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಬಾಲಗಣಪತಿ ಹವನ.6.06ರಿಂದ ಶ್ರೀ ಮಹಾಗಣಪತ್ಯಥರ್ವಶೀರ್ಷ ಅಖಂಡ ಪಾರಾಯಣ ಆರಂಭ. 7ರಿಂದ ಶ್ರೀಗೋಪಾಲಕೃಷ್ಣ ಪೂಜೆ, ಗೋಪೂಜೆ, ಗೋಸೇವೆಗಳ ಆರಂಭ, 8.30ರಿಂದ ಶ್ರೀಮಹಾಗಣಪತಿಹವನ, ಪೂರ್ಣನವಗ್ರಹಶಾಂತಿ, ಶನಿಶಾಂತಿಹವನ, 10.30ರಿಂದ ಶ್ರೀಹನುಮತ್ಪಂಚರತ್ನಸ್ತೋತ್ರಪಾರಾಯಣ, ಸಂಜೆ 5ರಿಂದ ಶನಿ ಕಲ್ಪೋಕ್ತಪೂಜೆಯ ಆರಂಭ, ರಾತ್ರಿ 7ಕ್ಕೆ ಶನಿಪೂಜಾ ಮಹಾಮಂಗಳಾರತಿ. ಮಾ.17ರಂದು ಬೆಳಗ್ಗೆ 6.06ರಿಂದ ಶ್ರೀ ಮಹಾಗಣಪತ್ಯಥರ್ವಶೀರ್ಷ ಅಖಂಡ ಪಾರಾಯಣ ಮಂಗಲ ಹಾಗೂ ಚತುದ್ರವ್ಯಾತ್ಮಕ ಶ್ರೀ ಮಹಾಗಣಪತ್ಯಥರ್ವಶೀರ್ಷ ಹವನ ನಡೆಯಲಿದೆ.

ಸೇವಾಕರ್ತರಿಗೆ ಗೋಗ್ರಾಸ ಸೇವೆ, ಗೋಪೂಜೆ, ಶನಿ ಕಲ್ಪೋಕ್ತ ಪೂಜೆ ಸಂಕಲ್ಪ ಮಾಡುವ ವ್ಯವಸ್ಥೆ, ಶನಿ ಶಾಂತಿ ಹವನ ಸಂಕಲ್ಪ,  ಇಷ್ಟಾರ್ಥ ಪ್ರಾಪ್ತಿಗಾಗಿ 108 ಅಥರ್ವಶೀರ್ಷ ಪಾರಾಯಣ, ಅಥರ್ವಶೀರ್ಷ ಹವನ ಸಂಕಲ್ಪ, ಮಾತೆಯರಿಗೆ ಕುಂಕುಮಾರ್ಚನೆ, ಶ್ರೀಗಣೇಶ ಪಂಚರತ್ನಸ್ತೋತ್ರ ಹಾಗೂ ಶ್ರೀಹನುಮತ್ಪಂಚರತ್ನಸ್ತೋತ್ರ ಪಾರಾಯಣಕ್ಕೆ ಅವಕಾಶವಿದೆ.  ಮೇ 16ರ ಸೂರ್ಯೋದಯದಿಂದ ಮೇ 17ರ  ಸೂರ್ಯೋದಯದ ತನಕ ಅಖಂಡವಾಗಿ ಶ್ರೀಗಣಪತ್ಯಥರ್ವಶೀರ್ಷ ಪಾರಾಯಣವು ನಡೆಯಲಿದ್ದು, ನಿರಂತರವಾಗಿ ಉಪಹಾರ ವ್ಯವಸ್ಥೆ ಇರಲಿದೆ.

Post a Comment

0 Comments