Ticker

6/recent/ticker-posts

Ad Code

ಪೆರ್ಲ ನೇತಾಜಿ ಗ್ರಂಥಾಲಯದಲ್ಲಿ ಬಾಲವೇದಿಯ ಮಕ್ಕಳ ವಾಚನಾ ಕಳರಿ - ರೀಡಿಂಗ್ ಥಿಯೇಟರ್

 

ಪೆರ್ಲ : ಪೆರ್ಲ ನೇತಾಜಿ ಸಾರ್ವಜನಿಕ ಗ್ರಂಥಾಲಯದಲ್ಲಿ ಬಾಲವೇದಿಯ ಮಕ್ಕಳ ವಾಚನಾ ಕಳರಿ ಅಂಗವಾಗಿ  ರೀಡಿಂಗ್ ಥೀಯೇಟರ್ ಕಾರ್ಯಕ್ರಮ ಜರಗಿತು.

 ಕವಿ ಶ್ರೀನಿವಾಸ ಪೆರಿಕ್ಕಾನ ರೀಡಿಂಗ್ ಥಿಯೇಟರ್ ಉದ್ಘಾಟಿಸಿ 'ಮಕ್ಕಳ ರಚನಾ ಕೌಶಲ್ಯತೆ ಎಳೆವೆಯಲ್ಲೇ ಬೆಳೆಯಲು ವಾಚನಾ ಕಳರಿ ಹೊಸ ಭರವಸೆಯನ್ನು ಮೂಡಿಸುತ್ತಿದೆ. ಅವರಿಗೆ ಅವಕಾಶಗಳನ್ನು ಒದಗಿಸಿ ಕೊಡುವುದು ಅತೀ ದೊಡ್ಡ ಕೆಲಸವಾಗಿದೆ' ಎಂದು ನುಡಿದರು.

ಬಳಿಕ ಸಂಪನ್ಮೂಲ ವ್ಯಕ್ತಿಯಾಗಿ ರಂಗಕರ್ಮಿ ಅಶೋಕ್ ಮಾಸ್ತರ್ ಕೊಡ್ಲಮೊಗರು  ತರಗತಿ ನಡೆಸಿದರು. ನಾಟಕ ಓದು, ಕಥಾ ಓದು ಮುಂತಾದ ಸಾಹಿತ್ಯ ಪ್ರಕಾರಗಳನ್ನು  ರೀಡಿಂಗ್ ಥಿಯೇಟರ್ ನಲ್ಲಿ ಅಳವಡಿಸುವಿಕೆಯ ಅಂಶಗಳ ಬಗ್ಗೆ ಪರಿಣಾಮಕಾರಿಯಾಗಿ ತರಗತಿ ನಡೆಸಿ ಮಕ್ಕಳಲ್ಲಿ ಉತ್ತಮ ಓದುಗನಲ್ಲಿರಬೇಕಾದ ಗುಣಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಂಥಾಲಯದ ಅಧ್ಯಕ್ಷರಾದ ರಾಮಕೃಷ್ಣ ರೈಯವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತರಾದ ವಿನೋದ್ ಅಮೆಕ್ಕಳ ಉಪಸ್ಥಿತರಿದ್ದರು. ಗ್ರಂಥಾಲಯ  ಕಾರ್ಯದರ್ಶಿ ಉದಯ ಸಾರಂಗ್ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಿಸಿದರು.

Post a Comment

0 Comments