ಪೆರ್ಲ : ಶೇಣಿ ತರವಾಡು ಮನೆ ಉಳ್ಳಾಕ್ಲು, ಧರ್ಮದೈವ ಚೆಂಬರಕಾನತ್ತಾಯ, ಧೂಮಾವತಿ, ರಕ್ತೇಶ್ವರಿ, ಸಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ಶ್ರೀ ದೈವಗಳ ನೇಮವು ಮೇ 9ರಿಂದ (ಇಂದಿನಿಂದ) ಮೇ 11ರ ವರೆಗೆ ಕುಂಟಾರು ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಕುಂಟಾರು ಬ್ರಹ್ಮಶ್ರೀ ವೇದಮೂರ್ತಿ ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.
ಇದರ ಅಂಗವಾಗಿ ಶನಿವಾರ (ಇಂದು) ಸಂಜೆ 3 ಗಂಟೆಯಿಂದ ಇಡಿಯಡ್ಕ ಕ್ಷೇತ್ರದಿಂದ ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಣೆ, 4.30ಕ್ಕೆ ಉಗ್ರಾಣ ತುಂಬಿಸುವುದು, 5 ಗಂಟೆಗೆ ತಂತ್ರಿವರ್ಯರ ಆಗಮನ, 5.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಸ್ವಾಮೀಜಿ ಆಶೀರ್ವಚನ ನೀಡುವರು. ಸಂಜೆ 6 ಗಂಟೆಯಿಂದ ವಿವಿಧ ವೈದಿಕ ತಾಂತ್ರಿಕ ಕಾರ್ಯಕ್ರಮ, 7ಗಂಟೆಗೆ ಶ್ರೀದುರ್ಗಾ ಬಂಟ ಮಹಿಳಾ ಸಂಘ ಪೆರ್ಲ ಇವರಿಂದ ಭಜನೆ, ಮೇ10ಕ್ಕೆ ಬೆಳಿಗ್ಗೆ 7.29ರ ವೃಷಭ ಲಗ್ನ ಶುಭ ಮುಹೂರ್ತದಲ್ಲಿ ತರವಾಡು ಮನೆಯ ಗೃಹ ಪ್ರವೇಶ, 8.29ರ ವೃಷಭ ಲಗ್ನ ಶುಭ ಮುಹೂರ್ತದಲ್ಲಿ ಶ್ರೀದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ತಂಬಿಲ ಸೇವೆ ಜರಗಲಿದೆ. ಬಳಿಕ 10.30ಕ್ಕೆ ರಸಮಂಜರಿ, 12.30ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಡನೀರು ಶ್ರೀಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡುವರು. ವಿವಿಧ ಗಣ್ಯರು ಭಾಗವಹಿಸುವರು. ಸಂಜೆ 7 ಗಂಟೆಗೆ ಉಳ್ಳಾಕ್ಲು ದೈವದ ನೇಮ, ರಾತ್ರಿ 10 ಗಂಟೆಗೆ ಹೊಸಮ್ಮ ದೈವದ ನೇಮ, ಮೇ11ಕ್ಕೆ ಬೆಳಿಗ್ಗೆ 5 ಗಂಟೆಗೆ ಧೂಮಾವತಿ ದೈವದ ನೇಮ, ಬೆಳಿಗ್ಗೆ 11 ಗಂಟೆಗೆ ಧರ್ಮದೈವ ಚೆಂಬರಕಾನತ್ತಾಯ ದೈವದ ನೇಮ, ಸಂಜೆ 3 ಗಂಟೆಗೆ ಪಂಜುರ್ಲಿ, ಕುರುವ, ಸಂಜೆ 5 ಗಂಟೆಗೆ ಕೊರತ್ತಿ ದೈವದ ನೇಮ, ರಾತ್ರಿ 7 ಗಂಟೆಗೆ ರಕ್ತೇಶ್ವರಿ ದೈವದ ನೇಮ, ರಾತ್ರಿ 10 ಗಂಟೆಗೆ ಗುಳಿಗ ದೈವದ ನೇಮದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ.

0 Comments