ಮಾಣಿಲ : ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ಪತ್ತನಾಜೆ ಉತ್ಸವವು ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ನೇತೃತ್ವದಲ್ಲಿ ಮೇ 25 ಸೋಮವಾರ ಜರಗಲಿದೆ. ಇದರಂಗವಾಗಿ ಬೆಳಿಗ್ಗೆ ಗಣಪತಿ ಹೋಮ, ನಿತ್ಯ ಪೂಜೆ, ಬೆಳಿಗ್ಗೆ 10 ರಿಂದ ಭಜನೆ, ಮಧ್ಯಾಹ್ನ 12ಕ್ಕೆ ಶ್ರೀ ದೇವಿಯ ಮಹಾಪೂಜೆ, ವಿಶೇಷ ಆಲಂಕಾರ ಪೂಜೆ, ದರ್ಶನ ಬಲಿ ಉತ್ಸವ, ಪ್ರಸಾದ ವಿತರಣೆ, ಸಂಜೆ 6 ಕ್ಕೆ ದೀಪಾರಾಧನೆ, ಭಜನೆ, ರಾತ್ರಿ 8 ಕ್ಕೆ ಶ್ರೀದೇವಿಯ ಮಹಾಪೂಜೆ, ವಿಶೇಷ ಪೂಜೆ, ದರ್ಶನ ಬಲಿ ಉತ್ಸವ, ಪ್ರಸಾದ ವಿತರಣೆ, ರಾತ್ರಿ 9ರಿಂದ ಶ್ರೀ ಮಂತ್ರಗುಳಿಗ ಹಾಗೂ ಸತ್ಯ ದೇವತೆ ದೈವದ ಕೆಂಡ ಸೇವೆ, ನೇಮೋತ್ಸವ ನಡೆಯಲಿರುವುದು.
ಮೇ 26ಕ್ಕೆ ಪ್ರಾತಃಕಾಲ 4ಕ್ಕೆ ದೈವದ ಪ್ರಸಾದ ವಿತರಣೆ ಬೆಳಿಗ್ಗೆ 5 ರಿಂದ : ಕೊರಗ ತನಿಯ ದೈವದ ಕೋಲ ನಡೆಯುವುದು.

0 Comments