ತಿರುವನಂತಪುರ : ಹಾಲಿ ಶಿಕ್ಷಣ ಸಚಿವರಾಗಿದ್ದ ಎಲ್‌ಡಿಎಫ್ ಅಭ್ಯರ್ಥಿ ವಿ. ಶಿವನ್‌ಕುಟ್ಟಿ ವಿರುದ್ಧ ನೇಮಮ್‌ನಲ್ಲಿ ಎನ್‌ಡಿಎ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಐತಿಹಾಸಿಕ ಜಯ ಗಳಿಸಿದ್ದಾರೆ. ಅವರು 3800 ಮತಗಳ ಮುನ್ನಡೆ ಸಾಧಿಸುವ ಮೂಲಕ ನೇಮಮ್ ಕ್ಷೇತ್ರದಲ್ಲಿ ಬಿಜೆಪಿಗೆ ಎರಡನೇ ಖಾತೆ ತೆರೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಶಬರಿನಾಥನ್ ಅವರು ಮೂರನೇ ಸ್ಥಾನಕ್ಕೆ ಸೀಮಿತರಾಗಿ ಸೋಲು ಕಂಡಿದ್ದಾರೆ.
ಈ ಬಾರಿಯ ಕೇರಳಂ ವಿಧಾನ ಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಮೊತ್ತ ಮೊದಲು ಚಾತನ್ನೂರಿನಲ್ಲಿ ಎನ್‌ಡಿಎ ಅಭ್ಯರ್ಥಿ ಬಿ.ಬಿ. ಗೋಪಕುಮಾರ್ 4000 ಕ್ಕೂ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಚಾತನ್ನೂರಿನಲ್ಲಿ ಬಿಜೆಪಿಗೆ ತಮ್ಮ ಮೊದಲ ಖಾತೆಯನ್ನು ತೆರೆದಿದ್ದಾರೆ. ಈರ್ವರಿಗೂ ಬಿಜೆಪಿ ಕೇಂದ್ರೀಯ ಸಮಿತಿ ಅಭಿನಂದನೆ ಸೂಚಿಸಿದೆ.

0 Comments