ಕಣ್ಣೂರು : ಐಜಿ ಕಚೇರಿಯ ಪಕ್ಕದಲ್ಲಿರುವ ಕಚೇರಿ ಬಳಿ ನಿಲ್ಲಿಸಲಾಗಿದ್ದ ಪೊಲೀಸ್ ಜೀಪನ್ನು ಕದ್ದು ಗಣ್ಯನಂತೆ ಸಾಗಿಸುವ ನಡುವೆ ಸ್ಥಳೀಯರ ಅನುಮಾನದಿಂದ ಸಿಕ್ಕಿ ಬಿದ್ದ ಘಟನೆಯೊಂದು ಕಣ್ಣೂರಿನಲ್ಲಿ ನಡೆದಿದೆ.
ಶನಿವಾರ ಮಧ್ಯರಾತ್ರಿಯ ಸುಮಾರಿಗೆ ಸೈಬರ್ ಸೆಲ್‌ನ ಜೀಪ್ ಕದ್ದೊಯ್ಯಲಾಗಿತ್ತು. ವಾಹನವನ್ನು ತಾವಕ್ಕರದಲ್ಲಿರುವ ಐಜಿ ಕಚೇರಿಯ ಪಕ್ಕದಲ್ಲಿರುವ ಕಚೇರಿ ಬಳಿ ನಿಲ್ಲಿಸಿದಲ್ಲಿಂದ ಕದ್ದಿದ್ದು ನಂತರ ಮುನೀಶ್ವರಂ ಕೋವಿಲ್‌ಗೆ ಹೋಗಿ ಅಲ್ಲಿನ ಪೆಟ್ರೋಲ್ ಪಂಪ್‌ವೊಂದರಿಂದ ಪೆಟ್ರೋಲ್ ತುಂಬಿಸಿಕೊಂಡು ನಂತರ ಗೂಡಂಗಡಿಯೊಂದಕ್ಕೆ ಹೋಗಿ ಚಹಾ ಕುಡಿಯುತ್ತಿದ್ದಾಗ ಇಲ್ಲಿನ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದರು. ನಂತರ ಅವರು ನಗರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು ಆರೋಪಿಯನ್ನು ಸ್ಥಳೀಯರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗುರುವಾಯೂರು ಮೂಲದ ಹಮ್ಸತ್ ಪ್ರಕರಣದಲ್ಲಿ ಬಂಧಿತ ಆರೋಪಿಯಾಗಿದ್ದಾನೆ.

0 Comments