Ticker

6/recent/ticker-posts

Ad Code

ಮೇ 31ಕ್ಕೆ ಆನೆಗುಂದಿ ಶ್ರೀಗಳ ಜನ್ಮ ವರ್ಧಂತಿಯ ಸುವರ್ಣ ಮಹೋತ್ಸವದಂಗವಾಗಿ ಪಡುಕುತ್ಯಾರಿನಲ್ಲಿ ಶ್ರೀ ಪುರುಷೋತ್ತಮ ಯಾಗ

ಪಡುಬಿದ್ರಿ :  ಪಡುಕುತ್ಯಾರು ಆನೆಗುಂದಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಜನ್ಮ ವರ್ಧಂತಿಯ ಸುವರ್ಣ ಮಹೋತ್ಸವ ಅಂಗವಾಗಿ ಹುಬ್ಬಳ್ಳಿ ವಿಶ್ವಬ್ರಾಹ್ಮಣ ಪ್ರತಿಷ್ಠಾನ ವತಿಯಿಂದ ಮೇ 31ರಂದು 7 ಗಂಟೆಗೆ ಪಡುಕುತ್ಯಾರಿನ ಮಹಾಸಂಸ್ಥಾನದ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ಶ್ರೀ ಪುರುಷೋತ್ತಮ ಯಾಗ ಹಾಗೂ ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ ನಡೆಯಲಿದೆ. ಶ್ರೀ ಗುರುಪಾದುಕಾ ಪೂಜೆ, 108 ದಂಪತಿ ಪೂಜೆ, ವಾಯನ ದಾನ, ಅಪೂಪಾದಿ ದಾನ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. ಆನೆಗುಂದಿ ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸ ಶಂಕರಾಚಾರ್ಯ ಗುರುನಾಥ ಆಚಾರ್ಯ ಪಂಡಿತ್ ಕಡ್ಲಾಸ್ಕರ್ ಅವರಿಂದ ಅಧಿಕಮಾಸ ಹಾಗೂ ಶ್ರೀ ಪುರುಷೋತ್ತಮ ಯಾಗದ ಮಹತ್ವ ವಿಷಯದ ಕುರಿತು ಧಾರ್ಮಿಕ ಪ್ರವಚನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Post a Comment

0 Comments