Ticker

6/recent/ticker-posts

Ad Code

ರಾಜಕೀಯ ವಿವಾದಕ್ಕೆ ಆಸ್ಪದವಾದ ಜಿಲ್ಲಾ ಶಾಲಾ ಪ್ರವೇಶೋತ್ಸವ ಸ್ಥಳ ಬದಲಾವಣೆ; ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ತ್ರಿಕರಿಪುರ ಕಾರ್ಯಕ್ರಮ ನಡೆಸಲು ನಿರ್ಧಾರ

ಕಾಸರಗೋಡು :  ಜಿಲ್ಲೆಯಲ್ಲಿ ಶಾಲಾ ಪ್ರವೇಶೋತ್ಸವಕ್ಕಾಗಿ ಗೊತ್ತುಪಡಿಸಿದ ಶಾಲೆಯ ಬದಲಾವಣೆ ರಾಜಕೀಯ ವಿವಾದವಾಗಿ ಮಾರ್ಪಟ್ಟಿದೆ. ಸಾರ್ವಜನಿಕ ಶಿಕ್ಷಣ ನಿರ್ದೇಶಕರು ನೀಡಿದ ಸಲಹೆಯ ಮೇರೆಗೆ, ಕಾರ್ಯಕ್ರಮವನ್ನು ಚಾಯೋತ್ ಸರ್ಕಾರಿ ಪ್ರೌಢಶಾಲೆಯಿಂದ ಸ್ಥಳಾಂತರಿಸಲು ನಿರ್ಧರಿಸಲಾಯಿತು.  ಜಿಲ್ಲಾಧಿಕಾರಿಗಳ ಕೊಠಡಿಯಲ್ಲಿ ನಡೆದ ಸಭೆಯಲ್ಲಿ, ಚಾಯೋತ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಲಾಗಿತ್ತು. ಬಳಿಕ ಸಾರ್ವಜನಿಕ ಶಿಕ್ಷಣ ನಿರ್ದೇಶಕರು  ಶಿಕ್ಷಣ ಸಚಿವರು ತ್ರಿಕರಿಪುರ ಕ್ಷೇತ್ರದ ಮತ್ತೊಂದು ಶಾಲೆಯಲ್ಲಿ ಕಾರ್ಯಕ್ರಮವನ್ನು ನಡೆಸಲು ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಚಾಯೋತ್ ಶಾಲೆಯಲ್ಲಿ ಸಂಘಟನಾ ಸಮಿತಿಯನ್ನು ರಚಿಸಿದ ನಂತರ ಸಚಿವರ ನಿರ್ದೇಶನ ಬಂದಿತು. ಶಾಲೆಯನ್ನು ಬದಲಾಯಿಸುವ ನಿರ್ಧಾರವು ರಾಜಕೀಯ ಒತ್ತಡದ ಭಾಗವಾಗಿದೆ ಎಂದು ಇದೀಗ ಜಿಲ್ಲಾ ಪಂಚಾಯತ್ ಆರೋಪಿಸಿದೆ.

Post a Comment

0 Comments