Ticker

6/recent/ticker-posts

Ad Code

ಕಾಸರಗೋಡಿನ ಮಹಿಳಾ ಕರಾಟೆ ಪಟು ಸೌಮ್ಯ ಎನ್.ಚಂಬ್ರಕಾನ ಸಹಿತ ಜಿಲ್ಲೆಯ ನಾಲ್ಕು ಮಂದಿಗೆ ಸೆಕೆಂಡ್ ಡಾನ್ ಪದವಿ ಪ್ರದಾನ

 

ಕಾಸರಗೋಡು : ತೃಶ್ಯೂರಿನಲ್ಲಿ ನಡೆದ ರಾಜ್ಯ ಮಟ್ಟದ ಸೀನಿಯರ್ ಕರಾಟೆ ಕ್ಯಾಂಪ್ ನಲ್ಲಿ ಕಾಸರಗೋಡಿನ ಮಹಿಳಾ ಕರಾಟೆ ತರಬೇತುದಾರೆ  ಸೌಮ್ಯ ಎನ್.ಚಂಬ್ರಕಾನ ಸಹಿತ ಜಿಲ್ಲೆಯ ನಾಲ್ಕು ಮಂದಿಗೆ 'ಸೆಕೆಂಡ್ ಡಾನ್' ಪದವಿ ನೀಡಿ ಪುರಸ್ಕರಿಸಲಾಯಿತು. ತೃಶ್ಯೂರಿನ ದೇವಮಾತ ಪಬ್ಲಿಕ್ ಶಾಲೆಯಲ್ಲಿ ನಡೆದ ರಾಜ್ಯ ಕರಾಟೆ ಕ್ಯಾಂಪ್ ಮತ್ತು ಬೆಲ್ಟ್ ಪ್ರದಾನ ಕಾರ್ಯಕ್ರಮವನ್ನು ತೃಶ್ಯೂರು ಕಾರ್ಪರೇಶನ್ ಮೇಯರ್  ಡಾ.ನಿಜಿ ಜಸ್ಟೀನ್ ಉದ್ಘಾಟಿಸಿದರು. ಕರಾಟೆ ಅಂತಾರಾಷ್ಟ್ರೀಯ ಚೀಫ್ ಇನ್ಸ್ಟ್ರಕ್ಟರ್ ಹನ್ಯಿ ಸತ್ರಜಿತ್ ಚೌಧರಿ  ಪದವಿ  ಪ್ರದಾನಗೈದರು. 

ಸೌಮ್ಯ ಎನ್, ಹೇಮಂತ್ ಕುಮಾರ್, ಕ್ರಿಸ್ ಜೋನ್, ಅಂಕಿತ್ ಆರ್ ಸೆಕೆಂಡ್ ಡಾನ್  ಪದವಿ ಪಡೆದವರಾಗಿದ್ದಾರೆ. ಇದರಲ್ಲಿ ಸೌಮ್ಯ ಎನ್. ಎಣ್ಮಕಜೆ ಪಂಚಾಯತಿನ ಚೆಂಬ್ರಕಾನ ನಿವಾಸಿಯಾಗಿದ್ದು ಬಾಲ್ಯ ಕಾಲದಿಂದಲೇ ಕರಾಟೆ ತರಬೇತುದಾರ ಪಿ ಕೆ ಆನಂದ್. ಬದಿಯಡ್ಕ ಅವರ ಬಳಿ ಕರಾಟೆ ಅಭ್ಯಾಸ ನಡೆಸಿ ವಿವಿಧ ಶಾಲೆ ಕಾಲೇಜುಗಳಲ್ಲಿ ತರಬೇತಿ ನೀಡುತ್ತಿದ್ದಾರೆ.

 'ವಾರಿಯರ್ಸ್ ಕರಾಟೆ ಅಕಾಡೆಮಿ' ಎಂಬ ಸ್ವಂತ ಸಂಸ್ಥೆ ಸ್ಥಾಪಿಸಿ ಆ ಮೂಲಕ ಕಾಸರಗೋಡು, ಮಂಗಳೂರು, ನೀರ್ಚಾಲು ಎಂಬಿಡೆಗಳಲ್ಲಿ ತರಬೇತಿ ನೀಡುತ್ತಿದ್ದಾರೆ. ಸತತ ಕರಾಟೆ ತರಗತಿ ನಡೆಸುತ್ತಾ  ಮಕ್ಕಳಿಗೆ ತರಬೇತಿ ನೀಡುತ್ತಾ ಇರುವ ಕಾಸರಗೋಡಿನ ಮಹಿಳಾ ಕರಾಟೆ ತರಬೇತುದಾರೆ  ಇದೀಗ ಸೆಕೆಂಡ್ ಡಾನ್  ಪದವಿ ಪಡೆದಿರುವುದು ಮಾದರಿಯಾಗಿದೆ.

Post a Comment

0 Comments