ಕುಂಬಳೆ: ಸೀನಿಯರ್ ಟೀಚರ್ಸ್ ಆಯೋಜಿಸಿದ ಸೀನಿಯರ್ ಟೀಚರ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಇತ್ತೀಚೆಗೆ ಕುಂಬಳೆ ಶೇಡಿಕಾವು ಮೈದಾನದಲ್ಲಿ ಜರುಗಿತು. ನಿವೃತ್ತ ದೈಹಿಕ ಶಿಕ್ಷಕರಾದ ಬಾಲಕೃಷ್ಣ ಶೆಟ್ಟಿ ಕಾಟುಕುಕ್ಕೆ ಕ್ರೀಡಾ ಕೂಟ ಉದ್ವಾಟಿಸಿ ಮಾತನಾಡಿ 'ದೈಹಿಕ ಆರೋಗ್ಯದ ಕ್ಷಮತೆಯನ್ನು ಹೆಚ್ಚಿಸುವ ಈ ಅಧ್ಯಾಪಕರ ಪಂದ್ಯಾಟವು ಪ್ರಶಂಸನೀಯವಾಗಿದೆ. ಕ್ರಿಯಾತ್ಮಕ ಕಲಿಕೆಯ ಜೊತೆ ಜೊತೆಗೆ ಮಕ್ಕಳ ಜೊತೆ ಬೆರೆಯುವ ಅಧ್ಯಾಪಕರೆಲ್ಲರು ಒಂದು ಕಡೆ ಒಟ್ಟು ಸೇರಿ ಕ್ರೀಡೆಯಲ್ಲಿ ಭಾಗವಹಿಸುವುದು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೂ ಇದು ಪೂರಕವಾಗಿದೆ' ಎಂದು ನುಡಿದರು.
ಕ್ರೀಡಾಕೂಟ ಸಂಘಟಕರಾದ ಅಶೋಕ್ ಮಾಸ್ತರ್ ಕೊಡ್ಲಮೊಗರು ಇವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ತೀರ್ಪುಗಾರರಾದ ಕೋಟಿ ಪೂಜಾರಿ, ನಿವೃತ್ತ ಶಿಕ್ಷಕ ಮಹಾಲಿಂಗೇಶ್ವರ ಎನ್ , ದಿನೇಶ್ ಮಾಸ್ತರ್ ಕುಂಬಳೆ, ಮಿಥುನ್ ಸ್ವರ್ಗ, ಹರಿನಾಥ್ ಶೆಟ್ಟಿ ಕುಬಣೂರು, ಪ್ರಶಾಂತ್ ಕುಂಟಿಕಾನ, ಉದಯ್ ಶೆಟ್ಟಿ ಸುಳ್ಯಮೆ ಉಪಸ್ಥಿತರಿದ್ದರು. ಕ್ರೀಡಾ ಸಂಚಾಲಕರಾದ ಉದಯ ಸಾರಂಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು .

0 Comments