ಬೇಕೂರು : ಶಾಂತಿಗುರಿ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದ ಪ್ರಥಮ ಪ್ರತಿಷ್ಠಾ ವರ್ಧಂತ್ಯೋತ್ಸವ ಮೇ 19 ಮಂಗಳವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಅಂದು ಬೆಳಿಗ್ಗೆ ಗಂಟೆ 7.30ಕ್ಕೆ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಗಣಪತಿ ಹೋಮ, ನವಕ ಪ್ರಧಾನ ಕಲಶ, ಪ್ರಧಾನ ಹೋಮ, ಬೆಳಿಗ್ಗೆ 9.00ರಿಂದ 12.00ರ ವರೆಗೆ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ, ಪ್ರಗತಿಪರ ಕೃಷಿಕ ದಾಮೋದರ ಉಬರ್ಲೆ ದೀಪ ಪ್ರಜ್ವಲನೆಗೈಯುವರು.
ಬಳಿಕ ನವಕ ಕಲಶಾಭಿಷೇಕ, ನಾಗ ರಕೇಶ್ವರಿ ದೈವಗಳಿಗೆ ತಂಬಿಲ ಸೇವೆ ಪರಿವಾರ ದೈವ ಸನ್ನಿಧಿಗಳಲ್ಲಿ ತಂಬಿಲ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಜರಗಲಿದೆ. ಸಾಯಂ 3.00 ರಿಂದ 7.00ರ ತನಕ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ಸಾಯಂ ಗಂಟೆ 7.30ಕ್ಕೆ ದುರ್ಗಾ ಪೂಜೆ, ರಾತ್ರಿ ಗಂಟೆ 8.30ಕ್ಕೆ ರಂಗಪೂಜೆ, ಪ್ರಸಾದ ವಿತರಣೆ ಜರಗಲಿದೆ. ಮೇ 20 ಬುಧವಾರ ಸಾಯಂ 7.00ರಿಂದ ದೈವಗಳಿಗೆ ವರ್ಷಾವಧಿ ಪರ್ವ ಹಾಗೂ ಕೊರಗಜ್ಜ ದೈವದ ಕೋಲ ಜರಗಲಿದೆ.

0 Comments