Ticker

6/recent/ticker-posts

18 ಗ್ರಾಂ ಎಂಡಿಎಂಎ ಸಹಿತ ಸಿಪಿಎಂ ಲೋಕಲ್ ಕಮಿಟಿ ಸದಸ್ಯನ ಸೆರೆ


 18 ಗ್ರಾಂ ಎಂಡಿಎಂಎ ಸಹಿತ ಮದ್ಯ, ಮಾದಕವಸ್ತು ವಿರೋಧಿ ಹೋರಾಟಗಾರ ಸಿಪಿಎಂ ನೇತಾರನನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ವಳಪಟ್ಟಣಂ ಲೋಕಲ್ ಸಮಿತಿ ಸದಸ್ಯ ವಿ.ಕೆ.ಶಮೀರ್ ಬಂಧಿತ ಆರೋಪಿ. ಬೆಂಗಳೂರಿನಿಂದ ಗೆಳೆಯನ ಜತೆ ಕಾರಿನಲ್ಲಿ ಬರುತ್ತಿದ್ದಾಗ, ಪೊಲೀಸರು ವಾಹನ ತಪಾಸಣೆ ನಡೆಸಿದ್ದು ಈ ವೇಳೆ ಎಂಡಿಎಂಎ ವಶಪಡಿಸಲಾಯಿತು. ಕಾರಿನಲ್ಲಿ  ಎಂಡಿಎಂಎ ಅಡಗಿಸಿಡಲಾಗಿತ್ತು. ಸ್ಥಳೀಯ ಡಿ.ವೈ.ಎಫ್.ಐ.ನೇತಾರನಾಗಿದ್ದ ಶಮೀರ್ ಕಳೆದ ಪಂಚಾಯತು ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿಯಾಗಿದ್ದ ಸ್ಪರ್ದಿಸಿದ್ದನು. ಈತ ಸಿಪಿಎಂ ಸಾರ್ವಜನಿಕ ಸಭೆಗಳಲ್ಲಿ ಮಾದಕವಸ್ತು ವಿರುದ್ದ ಭಾಷಣ  ಮಾಡುತ್ತಿದ್ದನು. ಅಲ್ಲದೆ ಹಲವು ಮದ್ಯವಿರೋಧಿ ಹೋರಾಟಗಳನ್ನು ಸಹ ನಡೆಸಿದ್ದನು.   ಶಮೀರ್ ನನ್ನು ಇದೀಗ ಪಕ್ಷದಿಂದ ಸಸ್ಪೆಂಡ್ ಮಾಡಲಾಗಿದೆ

Post a Comment

0 Comments