ತೊಟ್ಟಿತ್ತೋಡಿ: ವಾಣಿ ವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಕ - ಶಿಕ್ಷಕ ಸಂಘದ ಮಹಾಸಭೆ ಮತ್ತು ವಾಚನಾ ಸಪ್ತಾಹ ಸಮಾರೋಪವನ್ನು ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಟೀಚರ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿ ಲೆಕ್ಕಪತ್ರ ಮಂಡಿಸಿದರು. ಶಾಲಾ ಪಿ. ಟಿ ಎ ಅಧ್ಯಕ್ಷರಾದ ಶ್ರೀಯುತ ಗಣೇಶ ಜಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಹೇಮಾವತಿ, ಪ್ರೀ ಪ್ರೈಮರಿ ಪಿ. ಟಿ.ಎ ಅಧ್ಯಕ್ಷರಾದ ಶ್ರೀ ಯುತ ಜಯಪ್ರಕಾಶ್ ಕುಳೂರು, ಶ್ರೀ ಪ್ರೈಮರಿ ಎಂ ಪಿ ಟಿ ಎ ಅಧ್ಯಕ್ಷೆ ಶ್ರೀಮತಿ ಸುಮಿತ್ರ, ಶಾಲಾ ಮ್ಯಾನೇಜರ್ ರವರ ಪುತ್ರಿ ಪ್ರೇಮ ಶರದಿ ಉಪಸ್ಥಿತರಿದ್ದರು. ಪ್ರಸಕ್ತ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆಗಳು, ಯೋಜನೆಗಳ ಬಗ್ಗೆ ಹೆತ್ತವರೊಂದಿಗೆ ಚರ್ಚಿಸಿ ನೂತನ ಕಮಿಟಿಯನ್ನು ರೂಪೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಶಿಕ್ಷಕಿ ಸುಶ್ಮಿತಾರವರು ಮಕ್ಕಳ ಪಠ್ಯ ಚಟುವಟಿಕೆಗಳ ವೀಡಿಯೋ ಪ್ರದರ್ಶಿಸಿದರು. ತದನಂತರ ವಾಚನಾ ಸ ಪ್ತಾಹದ ಸಮಾರೋಪ ಜರಗಿತು. ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಲೇಖಕಿ ಶ್ರೀಮತಿ ಪ್ರಮೀಳಾ ಚುಳ್ಳಿಕ್ಕಾನರವರು ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ ಅನಿವಾರ್ಯತೆಯ ಬಗ್ಗೆ ಮಾತನಾಡಿದರು. ಇದೇ ಸಂದರ್ಭದಲ್ಲಿ ವಾಚನಾ ವಾರದ ಅಂಗವಾಗಿ ನಡೆಸಿದ ಸ್ಪರ್ಧೆಗಳಿಗೆ ಶಾಲಾ ಮ್ಯಾನೇಜರ್ ಶ್ರೀ ಯುತ ಡಾ.ಜಯಪ್ರಕಾಶ್ ನಾರಾಯಣರವರ ವತಿಯಿಂದ ಬಹುಮಾನ ವಿತರಿಸಿ ಮಕ್ಕಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮವನ್ನು ಶಿಕ್ಷಕಿ ಜಯಲಕ್ಷ್ಮಿ, ನಿರೂಪಿಸಿ ಶಿಕ್ಷಕಿ ದೀಕ್ಷಾ ರವರು ವಂದಿಸಿದರು.
0 Comments