ಮುಳಿಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಮಾದಕವಸ್ತು ವಿರುದ್ದ ದಿನವನ್ನು ಆಚರಿಸಲಾಯಿತು. ఈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಚಿತ್ರಾವತಿ ಚಿಗುರುಪಾದೆ ಯವರು ಈ ದಿನದ ವಿಶೇಷತೆಯನ್ನು ತಿಳಿಸಿದರು.
ಶಾಲಾ ಶಿಕ್ಷಕಿ ಐಶ್ವರ್ಯ ಮಾದಕ ವಸ್ತು ವಿರೋಧಿ ದಿನದ ಪ್ರತಿಜ್ಞೆಯನ್ನು ಹೇಳಿದರು. ಕಾರ್ಯಕ್ರಮದ ಅಂಗವಾಗಿ ಮಾದಕ ವಸ್ತು ವಿರೋಧಿ ದಿನದ ಕುರಿತದ ವೀಡಿಯೊ ಪ್ರದರ್ಶನವನ್ನು ನಡೆಸಲಾಯಿತು. ತದನಂತರ ಶಿಕ್ಷಕ ಶಿಕ್ಷಕಿಯರ ನೇತೃತ್ವದಲ್ಲಿ ಜುಂಬಾ ಡ್ಯಾನ್ಸ್ ಜರಗಿತು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ, ಮೂಡಿಸುವ ಉದ್ದೇಶದಿಂದ ರ್ ಯಾಲಿ ನಡೆಸಲಾಯಿತು.ಈ ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಹಿರಿಯ ಶಿಕ್ಷಕ ರಿಯಾಸ್ ಫೆರಿಂಗಡಿ ನಿರ್ವಹಿಸಿದರು. ಶಾಲಾ ಶಿಕ್ಷಕರಾದ ಅಬ್ದುಲ್ ಬಶೀರ್ ಹಾಗೂ ಧನ್ಯ ಪಿ.ವಿ ಈ ದಿನದ ಮಹತ್ವವನ್ನು ವಿವರಿಸಿ ಮಾತನಾಡಿದರು. ಅವರು ಮಕ್ಕಳಿಗೆ ಮಾದಕ ವಸ್ತುಗಳ ಹಾನಿಕಾರಕತೆ ಹಾಗೂ ಅದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು. ಇದರ ಅಂಗವಾಗಿ ಮಕ್ಕಳು ಶಿಕ್ಷಕರು ಹಾಗೂ ಪೋಷಕರು ನೇರಿ ಅಂಟಿ ಡ್ರಗ್ಸ್ ಸರಪಳಿ ನಿರ್ಮಿಸುವ ಮೂಲಕ ಎಲ್ಲೆಡೆಯಲ್ಲೂ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಮಕ್ಕಳು ಮಾದಕ ವಸ್ತು ವಿರೋಧಿ ದಿನದ ಕುರಿತಾದ ಪೊಸ್ಟರ್ ಗಳನ್ನು ತಯಾರಿಸಿದರು ಈ ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ರೇಷ್ಮಾ ಸ್ವಾಗತಿಸಿ, ಶಿಕ್ಷಕಿ ಜಸಿಲಾ ಧನ್ಯವಾದ ಅರ್ಪಿಸಿದರು.
0 Comments