Ticker

6/recent/ticker-posts

ಮುಂಡಿತ್ತಡ್ಕ ಪಳ್ಳಂನ ಆಯಿಲ್ ಮಿಲ್ಲಿನಿಂದ 25 ಗೋಣಿ ಚೀಲ ಗಿರಟೆ ಕಳವು ಪ್ರಕರಣ; ಇಬ್ಬರು ಕೋಜಿಕ್ಕೋಡ್ ನಿವಾಸಿಗಳ ಸೆರೆ


 ಬದಿಯಡ್ಕ: ಮುಂಡಿತ್ತಡ್ಕ ಪಳ್ಳಂನಲ್ಲಿ ಕಾರ್ಯಾಚರಿಸುತ್ತಿರುವ ಆಯಿಲ್ ಮಿಲ್ ನಿಂದ 25 ಗೋಣಿ ಚೀಲ ಗಿರಟೆ ಕಳವುಗೈದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕೋಜಿಕ್ಕೋಡ್ ಚಾತಂಗೋಡು ನಡ ನಿವಾಸಿ ಅಲ್ತಾಫ್(25), ಕೋಜಿಕ್ಕೋಡ್ ಕಾವಿಲಂಬಾರ ನಿವಾಸಿ ಅರುಣ್(28) ಬಂಧಿತ ಆರೋಪಿಗಳು. ಜೂನ್ 16  ರಂದು ರಾತ್ರಿ ಪಚ್ಚಂಬಳಂ ನಿವಾಸಿ ಸಕರಿಯ್ಯ ಎಂಬವರ ಮಾಲಕತ್ವದಲ್ಲಿರುವ ಮುಂಡಿತ್ತಡ್ಕ ಪಳ್ಳಂನಲ್ಲಿರುವ ಆಯಿಲ್ ಮಿಲ್ ನಿಂದ 15 ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿದ್ದ ಗಿರಟೆ ಕಳವುಗೈಯ್ಯಾಲಾಗಿತ್ತು. ಒಟ್ಟು 15 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಸಕರಿಯ್ಯ ಪೊಲೀಸರಿಗೆ ದೂರು ನೀಡಿದ್ದರು. ಬದಿಯಡ್ಕ ಎಸ್.ಐ.ಸುಮೇಶ್ ಬಾಬು, ಇತರರಾದ ಡಿ.ರೂಪೇಶ್, ಗೋಕುಲ್, ವಿನೋದ್ ಕುಮಾರ್ ಮೊದಲಾದವರು ಕಾರ್ಯಾಚರಣೆಯಲ್ಲಜ ಭಾಗವಹಿಸಿದರು

Post a Comment

0 Comments