Ticker

6/recent/ticker-posts

ಆರೋಗ್ಯ ಸಚಿವೆ ರಾಜಿನಾಮೆಗೆ ಒತ್ತಾಯಿಸಿ ಪೆರ್ಲದಲ್ಲಿ ಮುಸ್ಲಿಂ ಯೂತ್ ಲೀಗ್ ಪ್ರತಿಭಟನೆ

 


ಪೆರ್ಲ : ಕೊಟ್ಟಾಯಂ ಮೆಡಿಕಲ್ ಕಾಲೇಜ್ ಕಟ್ಟಡ ಕುಸಿದು ಮಹಿಳೆಯೋರ್ವೆ ದುರಂತ ಸಾವು ಕಂಡ ಪ್ರಕರಣದ ಹೊಣೆಗಾರಿಕೆಯನ್ನು ಹೊತ್ತಿರುವ ಆರೋಗ್ಯ ಸಚಿವೆ ವೀಣಾ ಜೋರ್ಜ್ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಮುಸ್ಲಿಂ ಯೂತ್ ಲೀಗ್ ಎಣ್ಮಕಜೆ ಪಂಚಾಯತ್ ಸಮಿತಿ  ನೇತೃತ್ವದಲ್ಲಿ ಪೆರ್ಲ ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ಮತ್ತು ರಸ್ತೆ ತಡೆ ನಡೆಯಿತು. 


ಮುಸ್ಲಿಂ ಲೀಗ್ ಎಣ್ಮಕಜೆ ಪಂ.ಸಮಿತಿ ಅಧ್ಯಕ್ಷ ಎ.ಕೆ.ಶೇರಿಫ್ ಉದ್ಘಾಟಿಸಿದರು. ಮುಸ್ಲಿಂ ಯೂತ್ ಲೀಗ್ ಪಂ.ಸಮಿತಿ ಅಧ್ಯಕ್ಷ ಹಕೀಂ ಖಂಡಿಗೆ ಅಧ್ಯಕ್ಷತೆವಹಿಸಿದ್ದರು.ಎಣ್ಮಕಜೆ ಪಂ. ಉಪಾಧ್ಯಕ್ಷೆ ರಮ್ಲ ಇಬ್ರಾಹಿಂ, ಐಯುಎಂಎಲ್ ಪ್ರ.ಕಾರ್ಯದರ್ಶಿ ಆಶ್ರಫ್ ಅಮೆಕ್ಕಳ, ಉಪಾಧ್ಯಕ್ಷ ರಸಾಕ್ ಮೂಲೆ, ಸಮೀಲ್ ಪೆರ್ಲ, ಇಬ್ರಾಹಿಂ ಪೆರ್ಲ, ಮನ್ಸೂರ್ ನಡುಬೈಲ್,ಎಂಎಸ್ ಎಫ್ ಪ್ರ.ಕಾರ್ಯದರ್ಶಿ ಮನ್ಸೂರ್ ಕೆ.ಕೆ.ರೋಡ್, ಸುಲ್ತಾನ್ ಪೆರ್ಲ,ಸಮಾಸ್ ಅಮೆಕ್ಕಳ, ಹಸೀರ್ ಮೂಲೆ, ಸಿರಾಜ್ ಅಲಿ, ಇಬ್ರಾಹಿಂ ಅಡ್ಕ ಸ್ವಾಗತಿಸಿ ಇರ್ಷಾದ್ ಬಾರಿಕ್ಕಾಡ್ ವಂದಿಸಿದರು. 


Post a Comment

0 Comments