ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದಲ್ಲಿ 2 ವರ್ಷ ಅವಧಿಗೆ ಅನು ವಂಶಿಕ ವಲ್ಲದ ಟ್ರಸ್ಟಿಗಳನ್ನು ನೇಮಕಗೊಳಿಸಿ ಮಲಬಾರ್ ದೇವಸ್ವಂ ಮಂಡಳಿಯ ವಿಭಾಗೀಯ ಹೊರಡಿಸಿದ್ದಾರೆ.
ಜೂ. 26ರಂದು ನಡೆದ ಪ್ರದೇಶ ಸಮಿತಿಯ ನಿರ್ಣಯ ಪ್ರಕಾರ ಆಡಳಿತ ಮಂಡಳಿ ಅಧ್ಯಕ್ಷರಾಗಿ ಪದ್ಮನಾಭ ಶೆಟ್ಟಿ ಕೆ. ಚಕ್ಕಿತಡ್ಕ ಹಾಗೂ ಮೊಕ್ತೇಸರರಾಗಿ ಯೋಗೀಶ ಖಂಡೇರಿ, ನಾರಾಯಣ ಬಿ. ಬಾಳೆಮೂಲೆ, ಕೃಷ್ಣ ನಾಯ್ಕ ಬಾಳೆಮೂಲೆ, ನಾರಾಯಣನ್ ಕೆ. ಕಾಟುಕುಕ್ಕೆ ನೇಮಕ ಗೊಂಡಿದ್ದಾರೆ. ನೂತನ ಟ್ರಸ್ಟಿಗಳು ನೀಲೇಶ್ವರದ ಮಲಬಾರ್ ದೇವಸ್ವಂ ಮಂಡಳಿಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಜು8.ಕ್ಕೆ ದೇವಸ್ಥಾನದಲ್ಲಿ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
0 Comments