ಉಪ್ಪಳ : ಸಂಸಾರ ಎಂಬ ಸಾಗರದಲ್ಲಿ ಆಕರ್ಷಣೆ ಕಡಿಮೆಯಾಗುವುದರಿಂದ ಪತಿ- ಪತ್ನಿ, ಮಕ್ಕಳ ನಡುವಿನ ಸಾಮರಸ್ಯ ಕುಂಠಿತವಾಗುತ್ತಿದೆ. ಇದಕ್ಕೆ ಪೂರಕವಾಗಿ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ನಡೆಯುವ ಸಾಮೂಹಿಕ ಆರಾಧನ ಪದ್ದತಿಯಲ್ಲಿ ಪಾಲ್ಗೊಳ್ಳುವುದರಿಂದ ಭಗವತ್ ಕೃಪೆ ಪ್ರಾಪ್ತವಾಗಿ ಸಂಸಾರ ಸುಭಿಕ್ಷೆ ಸಾಧ್ಯ ಎಂದು ಕೊಂಡೆವೂರು ಶ್ರೀ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಅವರು ಅಂಬಾರು ಕ್ಷೇತ್ರದಲ್ಲಿ ನಡೆದ ನವಗ್ರಹ ಸಹಿತ ಸ್ವಯಂವರ ಪಾರ್ವತಿ ಯಾಗದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಯಾಗ ಸಮಿತಿ ಅಧ್ಯಕ್ಷ ಶುಭಕರ ಶೆಟ್ಟಿ ತೋಟ ಅಧ್ಯಕ್ಷತೆವಹಿಸಿದ್ದರು.ಡಾ| ರವೀಶ್ ಪಡುಮಲೆ ಧಾರ್ಮಿಕ ಭಾಷಣಗೈದರು. ಹೇರಂಬ ಇಂಡಸ್ಟ್ರೀಸ್ ಮುಂಬಯಿಯ ಆಡಳಿತ ನಿರ್ದೇಶಕ ಡಾ। ಸದಾಶಿವ ಶೆಟ್ಟಿ ಕುಳೂರು,ಕನ್ಯಾನ,ಕರ್ನಾಟಕ ಸರಕಾರ ಧಾರ್ಮಿಕದತ್ತಿ ಇಲಾಖೆ ಸದಸ್ಯೆ ಮಲ್ಲಿಕಾ ಪಕಳ ಮಲಾರ್‌ಬೀಡು ಮುಖ್ಯ ಅತಿಥಿಗಳಾಗಿದ್ದರು. ಮಂಗಲ್ಪಾಡಿ ಗ್ರಾ. ಪಂ.ಸದಸ್ಯೆ ರೇವತಿ ಕಮಲಾಕ್ಷ,ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ವಿಶ್ವಸ್ಥ ಮಂಡಳಿ ಸದಸ್ಯ ಶಶಿಧರ ಶೆಟ್ಟಿ ಗ್ರಾಮ ಚಾವಡಿ,ಧಾರ್ಮಿಕ ಮುಂದಾಳು ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು,ಅಂಬಾರು ಶ್ರೀ ಸದಾಶಿವ ದೇವಸ್ಥಾನ ಆಡಳಿತ ಮೊಕೇಸರ ಎಚ್.ಕುಂಞಣ್ಣ ಶೆಟ್ಟಿ, ಡಾ| ಕೌಶಿಕ್ ಶೆಟ್ಟಿ,ವಿಜಯ ಕುಮಾರ್ ಕೆ.ಆರ್., ನಾರಾಯಣ ಪೂಜಾರಿ ಅಮೆತ್ತೋಡು, ಶ್ರೀಧರ ಪಂಜ,ಪ್ರಶಾಂತ್ ವಾನಂದ ಶಿರಿಯ, ರೇಷ್ಮಾ ಗಣೇಶ್ ರೈ ಬೆಂಗಳೂರು ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಾಲಕೃಷ್ಣ ವೈದ್ಯರು,ಉದ್ಯಮಿ ವಿಜಯ ಕುಮಾರ್ ಕೃಷ್ಣನಗರ, ವೀರೇಂದ್ರ ಐಲ ಅವರನ್ನು ಸನ್ಮಾನಿಸಲಾಯಿತು. ಯಾಗ ಸಮಿತಿ ಕಾರ್ಯಧ್ಯಕ್ಷ ಬಾಲಕೃಷ್ಣ ಅಂಬಾರು ಸ್ವಾಗತಿಸಿ ಪ್ರ.ಕಾರ್ಯದರ್ಶಿ ಸಮಂತ್ ಕುಮಾರ್ ಶೆಟ್ಟಿ ವಂದಿಸಿದರು. ಪದ್ಮಮೋಹನ್ ದಾಸ್ ಐಲ ಹಾಗೂ ಮೀರಾ ಆಳ್ವ ನಿರೂಪಿಸಿದರು.
0 Comments