Ticker

6/recent/ticker-posts

ಎಡನೀರು ಶ್ರೀಗಳ ಪಂಚಮ ಚಾತುರ್ಮಾಸ್ಯ ವ್ರತಾಚರಣೆ : ಮಾನ್ಯ ವಲಯ ಸಮಿತಿ ರಚನೆ



ಜುಲೈ 10 ರಿಂದ ಸೆಪ್ಟೆಂಬರ್ 07ರ ತನಕ ಎಡನೀರು ಶ್ರೀ ಮಠದಲ್ಲಿ ನಡೆಯುವ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಮಾನ್ಯ ವಲಯ ಸಮಿತಿಯ ಸಭೆಯು ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಜರಗಿತು. ಎಡನೀರು ಶ್ರೀ ಮಠದ ಆಡಳಿತಾಧಿಕಾರಿಗಳಾದ ರಾಜೇಂದ್ರ ಕಲ್ಲೂರಾಯ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಮಾರು ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ಎಡನೀರು ಮಠದ ಚಾತುರ್ಮಾಸ್ಯ ಸಮಿತಿ ಜೊತೆ ಕಾರ್ಯದರ್ಶಿ ಸೂರ್ಯನಾರಾಯಣ ಭಟ್ ಎಡನೀರು, ಸಂಚಾಲಕರಾದ ಸತೀಶ್ ರಾವ್ ಎಡನೀರು, ಬದಿಯಡ್ಕ ಗ್ರಾಮ ಪಂಚಾಯತ್ ಜನಪ್ರತಿನಿಧಿ ಶ್ಯಾಮ ಪ್ರಸಾದ್ ಮಾನ್ಯ, ಮಹೇಶ್ ವಳಕುಂಜ, ಮಹಿಳಾ ವೃಂದದ ಕಾರ್ಯದರ್ಶಿ ಸರಸ್ವತಿ ಕಾರ್ಮಾರು, ಕ್ಷೇತ್ರದ ಟ್ರಸ್ಟಿ ನವೀನ್ ಚಂದ್ರ ಕಾರ್ಮಾರು ಮೊದಲಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ನೂತನ ವಲಯ ಸಮಿತಿಯನ್ನು ರೂಪೀಕರಿಸಲಾಯಿತು. ಅಧ್ಯಕ್ಷರಾಗಿ ರಾಮ ಕೆ ಕಾರ್ಮಾರು, ಉಪಾಧ್ಯಕ್ಷರಾಗಿ ಸುಂದರ ಶೆಟ್ಟಿ ಕೊಲ್ಲಂಗಾನ, ಶ್ಯಾಮ್ ಪ್ರಸಾದ್ ಮಾನ್ಯ, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ವಳಕುಂಜ, ಜತೆ ಕಾರ್ಯದರ್ಶಿಗಳಾಗಿ ವಿಜಯ್ ಕುಮಾರ್ ಮಾನ್ಯ, ಪುನೀತ್ ಕಾರ್ಮಾರು, ಕೋಶಾಧಿಕಾರಿಯಾಗಿ ಸಂತೋಷ ಕುಮಾರ್ ಎಸ್ ಮಾನ್ಯ ಹಾಗೂ ಇತರ ಸಮಿತಿಯ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

ಮಾನ್ಯ ವಲಯ ಸಮಿತಿಯ ವತಿಯಿಂದ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆಯ ಸಂಧರ್ಭದಲ್ಲಿ ಆಗಸ್ಟ್ 24ರಂದು ಹಸಿರುವಾಣಿ ಹೊರೆ ಕಾಣಿಕೆ ಸಹಿತ ಒಂದು ದಿನದ ಪೂರ್ಣ ಸೇವೆಯನ್ನು ಹಮ್ಮಿಕೊಳ್ಳುವುದಾಗಿ ತೀರ್ಮಾನಿಸಲಾಯಿತು. ಕ್ಷೇತ್ರದ ಟ್ರಸ್ಟಿ ಸುಂದರ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿ ಯುವಕ ವೃಂದದ ಅಧ್ಯಕ್ಷರಾದ ವಿಜಯಕುಮಾರ್ ಮಾನ್ಯ ವಂದಿಸಿದರು.

Post a Comment

0 Comments