ಕಾಸರಗೋಡು: ಪಾಡಿ ಶ್ರೀ ಪುಳ್ಳಿಕರಿಂಗಾಳಿ ಭಗವತೀ ಕ್ಷೇತ್ರ ವ್ಯಾಪ್ತಿಯ ಬಾರಿಕ್ಕಾಡು ಪ್ರಾದೇಶಿಕ ಸಮಿತಿಯಲ್ಲಿರುವ ಬಾರಿಕ್ಕಾಡು ಪುದಿಯ ಪುರ ತರವಾಡಿನಲ್ಲಿ 2026 ರಲ್ಲಿ ತರವಾಡು ಸದಸದಯ ಕೃಷ್ಣನ್ ಉದಯಗಿರಿ (ಪಳ್ಳತ್ತಡ್ಕ) ಅವರ ಪ್ರಾರ್ಥನೆಯಂತೆ ನಡೆಯಲಿರುವ ಶ್ರೀ ವಯನಾಟ್ಟು ಕುಲವನ್ ತೆಯ್ಯಂಕಟ್ಟು ಮಹೋತ್ಸವದ ಅವಲೋಕನ ಸಭೆ ನಡೆಯಿತು.
ಬಾರಿಕ್ಕಾಡು ಪುದಿಯ ಪುರ ತರವಾಡಿನಲ್ಲಿ ನಡೆದ ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ನಡೆಯಿತು.
ಅನಂತರ ನಡೆದ ಸಭೆಯನ್ನು ಪಾಡಿ ಶ್ರೀ ಪುಳ್ಳಿಕರಿಂಗಾಳಿ ಭಗವತಿ ಕ್ಷೇತ್ರದ ಮಾಜಿ ಕಾರ್ಯದರ್ಶಿ ಹಾಗೂ ಉಪದೇಶಕ ಸಿ.ವಿ.ಕೃಷ್ಣನ್ ಉದ್ಘಾಟಿಸಿದರು. ಕ್ಷೇತ್ರ ಭರಣ ಸಮಿತಿ ಅಧ್ಯಕ್ಷ ಕುಟ್ಟಿಯೇಟನ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಸುರೇಶ್ ಪಾಡಿ, ಕೋಶಾಧಿಕಾರಿ ನಾರಾಯಣ ತಾರ್ಲಾಯಿ, ಇತರ ಪದಾಧಿಕಾರಿಗಳಾದ ಕುಮಾರನ್ ನೆಲ್ಪಾಡಿ, 4 ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಮಾತೃ ಸಮಿತಿ ಸದಸ್ಯರು, ಬಾರಿಕ್ಕಾಡು ಶ್ರೀ ಪುದಿಯಪುರ ತರವಾಡು ಪ್ರಮುಖರಾದ ಕುಮಾರನ್ ಮುಳ್ಳಂಬಾಡಿ, ಕೃಷ್ಣನ್ ಮಾಸ್ತರ್ ಕುಂಬಳೆ, ಚಿರಿಯಂಡ ಬಡಕಾಜೆ, ರಾಘವನ್ ಕನಕತ್ತೋಡಿ, ಸುರೇಶ್ ಪಡಿಕಲ್, ರಾಘವನ್ ಬಾರಿಕ್ಕಾಡು, ಕೃಷ್ಣ ಬಾರಿಕ್ಕಾಡು , ಗಂಗಾ ನಾರಾಯಣ, ಜನಾರ್ಧನ ಪೂಜಾರಿಮೂಲೆ ಸಹಿತ ಹಲವರು ಮಾತನಾಡಿದರು. ಗಂಗಾಧರ ಪಳ್ಳತ್ತಡ್ಕ ಸ್ವಾಗತಿಸಿ ಕೃಷ್ಣಪ್ರಸಾದ್ ಭಗವತಿ ನಗರ ವಂದಿಸಿದರು. ಸಭೆಯಲ್ಲಿ ತೆಯ್ಯಂಕಟ್ಟು ಮಹೋತ್ಸವದ ವಿವಿದ ವಿಷಯಗಳ ಕುರಿತು ಚರ್ಚಿಸಲಾಯಿತು
0 Comments