ವರ್ಕಾಡಿ : ಶ್ರೀ ಸುಬ್ರಹ್ಮಣ್ಯ ಎ. ಎಲ್.ಪಿ.ಶಾಲೆ ಮುಡೂರುತೋಕೆ ಶಾಲೆಯಲ್ಲಿ ಇತ್ತೀಚೆಗೆ ಶಾಲಾ ಮಕ್ಕಳ ಚುನಾವಣೆಯು ಜರಗಿತು. ವಯಸ್ಕರ ಮತದಾನಕ್ಕೆ ಹೋಲುವಂತೆ ನಾಮಪತ್ರ ಸಲ್ಲಿಕೆ, ಮತ ಯಾಚನೆಯಂತಹ ಎಲ್ಲಾ ಹಂತಗಳನ್ನು ಈ ಚಟುವಟಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು.
ಮಕ್ಕಳೇ ಚುನಾವಣಾ ಅಧಿಕಾರಿಗಳಾದರು, ಮತದಾರರ ಪಟ್ಟಿ, ವೋಟರ್ ಸ್ಲೀಪ್, ಮುಂತಾದವುಗಳು ಸಿದ್ಧಪಡಿಸಲಾಗಿತ್ತು. ಮತದಾನದ ಬಳಿಕ ಎಲ್ಲರ ಸಮ್ಮುಖದಲ್ಲಿ ಮತ ಎಣಿಕೆ ಮಾಡಲಾಯಿತು.
ಶಾಲಾ ಚುನಾವಣೆಯಲ್ಲಿ ವಿದ್ಯಾರ್ಥಿನಿ ಕುಮಾರಿ ಆಯಿಷತ್ ಮಿಜ್ವಾನ ಹೆಚ್ಚಿನ ಮತಗಳನ್ನು ಪಡೆದು ಶಾಲಾ ನಾಯಕಿಯದರು. ಶಾಲಾ ಉಪ ನಾಯಕನಾಗಿ ವಿದ್ಯಾರ್ಥಿ ಮೊಕ್ಷಿತ್ ಆಯ್ಕೆಯಾದರು. ಶಾಲಾ ಅಧ್ಯಾಪಿಕೆಯರು ಚುನಾವಣಾ ಪ್ರಕ್ರಿಯೆಗೆ ನೇತೃತ್ವ ನೀಡಿದರು. ಶಾಲಾ ಮುಖ್ಯಶಿಕ್ಷಕ ಶ್ರೀ ಶೈಲೇಶ್ ರವರು ಚುನಾವಣೆಯ ಮೇಲ್ನೋಟ ವಹಿಸಿದರು.
0 Comments