Ticker

6/recent/ticker-posts

ತೀವ್ರ ಕಡಲ್ಕೊರೆತದ ಪ್ರದೇಶಗಳ ಜನರ ಭೀತಿ ದೂರೀಕರಿಸಲು ಅಗತ್ಯದ ಕ್ರಮ ಕೈಗೊಳ್ಳಲು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಒತ್ತಾಯ


 ಕಾಸರಗೋಡು:  ಜಿಯೊ ಬ್ಯಾಗುಗಳನ್ನು ಇರಿಸಿ‌ ನಿರ್ಮಿಸಿದ ಸಂರಕ್ಷಣ ಗೋಡೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಕಡಲ್ಕೊರೆತದ ಆತಂಕ‌ ನೀಗಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್.ಒತ್ತಾಯಿಸಿದ್ದಾರೆ.  ಅವರು ತೀವ್ರ ಕಡಲ್ಕೊರೆತ ಉಂಟಾಗಿರುವ ಉದುಮ ಮಂಡಲದ ಕೀಯೂರು, ತೃಕ್ಕನ್ನಾಡ್ ಪ್ರದೇಶಗಳಿಗೆ ಬೇಟಿ ನೀಡಿ ಈ ರೀತಿ ಹೇಳಿದರು. ಕಡಲ ತೀರದ ಹಲವು ಮನೆಗಳು , ದಸ್ತೆ, ಇತರ ಸಂಸ್ಥೆಗಳು ಕಡಲ್ಕೊರೆತದ ಭೀತಿಯಲ್ಲಿದೆ. ಈ ಪ್ರದೇಶದ ಮನೆಗಳಲ್ಲಿ ವಾಸುಸುವವರು ಆತಂಕದ ಜೀವನ ನಡೆಸುತ್ತಿದ್ದು ಅವರನ್ನು ಬೇರೆಡಗೆ ಸ್ಥಳಾಂತರಿಸಬೇಕು ಎಂದವರು ಒತ್ತಾಯಿಸಿದರು.



    ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಬಾಬುರಾಜ್, ಉದುಮ‌ ಮಂಡಲ ಅಧ್ಯಕ್ಷೆ ಶೈನಿ ಶಶಿಧರನ್,‌ ಪ್ತಧಾನ ಕಾರ್ಯದರ್ಶಿ ಮುರಳೀಧರನ್ ಮೊದಲಾದವರು ಉಪಸ್ಥಿತರಿದ್ದರು

Post a Comment

0 Comments